ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮಹಿಳೆ ಒಬ್ಬರನ್ನ ಟ್ರೈನ್ ಬರುತ್ತಿದ್ದಾಗ ಹಿಂಬದಿಯಿಂದ ನೂಕಿ, ಹಳಿಗೆ ಬೀಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ರೆಜಿಲ್ನ ಬ್ರಸೆಲ್ಸ್ ಮೆಟ್ರೋ ನಿಲ್ದಾಣದಲ್ಲಿ ಈ ಕೃತ್ಯ ನಡೆದಿದ್ದು, ವೈರಲ್ ಆಗಿರುವ ವಿಡಿಯೋ ಭಯ ಹುಟ್ಟಿಸುವಂತಿದೆ.
ಅದೃಷ್ಟವೆಂಬಂತೆ ಮಹಿಳೆ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾಳೆ. ಆದರೆ ವಿಡಿಯೋದಲ್ಲಿ ತೋರಿಸುವಂತೆ ಮಹಿಳೆ ಮೆಟ್ರೋ ಹಳಿಗೆ ಬೀಳುತ್ತಿದ್ದಂತೆ ಟ್ರೈನ್ ಬಂದು ನಿಂತಿದೆ. ಮೆಟ್ರೋ ಆಕೆಯ ಎದುರು ಕೂದಲೆಳೆ ಅಂತರದಲ್ಲಿ ಬಂದು ನಿಂತಿದೆ.
ವಿಡಿಯೋದಲ್ಲಿ.. ಮಹಿಳೆ ಒಬ್ಬರು ಪ್ಲಾಟ್ಫಾರ್ಮ್ನಲ್ಲಿ ನಿಂತುಕೊಂಡು ಇರುತ್ತಾರೆ. ಆಕೆಯ ಹಿಂಬದಿಯಿಂದ ವ್ಯಕ್ತಿಯೋರ್ವ ಬರುತ್ತಿರುತ್ತಾನೆ. ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಮಹಿಳೆಯನ್ನ ನೂಕಿ ಹಳಿ ಮೇಲೆ ಬೀಳಿಸುತ್ತಾನೆ. ಇದನ್ನ ಗಮನಿಸಿದ ಮೆಟ್ರೋ ಚಾಲಕ ಬ್ರೇಕ್ ಹಾಕಿ ಟ್ರೈನ್ ನಿಲ್ಲಿಸಿದ್ದಾನೆ. ನಂತರ ಅಲ್ಲಿದ್ದವರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ.
🔴QNN🔴
⚡️A French migrant pushed a 55-year-old woman under a train in the Brussels subway.Fortunately, the driver reacted quickly and stopped the train. The intruder tried to run away, but was arrested by the police. pic.twitter.com/Y3gvDA60J7
— LA CASINO (@LeagueAlain) January 16, 2022