ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಬಿತ್ತನೆಗೆ ಬೇಕಿದ್ದ ಮೆಣಸಿನಕಾಯಿ ಬೀಜಕ್ಕಾಗಿ ಪರದಾಟ ಶುರುವಾಗಿದ್ದು ಬಿತ್ತನೆ ಬೀಜಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ರೈತರು ಮುತ್ತಿಗೆ ಹಾಕಲು ಮುಂದಾದ ಘಟನೆ ನಡೆದಿದೆ.

ಮುಂಗಾರು ರೈತರ ಕೈ ಹಿಡಿದರೂ ಬಿತ್ತನೆ ಸಮಯದಲ್ಲಿ ಬೀಜ ಸಿಗದಿರುವುದರಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಕೆ. ಜಿ. ಮೆಣಸಿನಕಾಯಿ ಬೀಜಕ್ಕೆ ಈ ಹಿಂದೆ 45 ಸಾವಿರ ರೂ ಇದ್ದ ಬೆಲೆ ಇದೀಗ ಒಂದು ಲಕ್ಷಕ್ಕೂ ಅಧಿಕವಾಗಿದೆ ಎಂದು ಆರೋಪಿಸಲಾಗಿದೆ.

ಇನ್ನು ದುಪ್ಪಟ್ಟು ಬೆಲೆ ಕೊಟ್ಟರೂ ಬೀಜ ಸಿಗುತ್ತಿಲ್ಲ ಎಂದು ರೈತರು ಆರೋಪಿಸಿ ಬೀಜ ಕೊಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತರ ಮನವೊಲಿಸಿ ಅವರನ್ನ ಹೊರಕಳಿಸಿದ್ದಾರೆ. ಇನ್ನು ಕೇವಲ 15 ದಿನಗಳಲ್ಲಿ ಮೆಣಸಿನಕಾಯಿ ಬೀಜ ಬಿತ್ತನೆ ಮಾಡಬೇಕಿದ್ದು ಬೀಜಕ್ಕೆ ಹಾಹಾಕಾರ ಶುರುವಾಗಿದೆ ಎನ್ನಲಾಗಿದೆ.

The post ಮೆಣಸಿನಕಾಯಿ ಬೀಜಕ್ಕೆ ಹಾಹಾಕಾರ: ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಗಣಿನಾಡ ರೈತರು appeared first on News First Kannada.

Source: newsfirstlive.com

Source link