ಕೊರೊನಾ ಬೆನ್ನಲ್ಲೇ ಮತ್ತೊಂದು ಭಯಾನಕ‌ ಸೋಂಕು ಕಾಣಿಸಿಕೊಳ್ಳುವ ಎಚ್ಚರಿಕೆಯನ್ನು ವಿಜ್ಞಾನಿಗಳು ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಹೊಸ ಸೋಂಕಿನ ಕಾಟ ಆರಂಭವಾಗಲಿದ್ದು ಮೆದುಳನ್ನೇ ತಿನ್ನುವ ಅಮೀಬಾ, ಮಾಂಸವನ್ನೇ ತಿನ್ನುವ ಬ್ಯಾಕ್ಟೀರಿಯಾಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾತಾವರಣದಲ್ಲಿ ಬದಲಾವಣೆಗಳಾಗುತ್ತಿರುವುದರಿಂದ ಇಂಥ ಹೊಸ ಹೊಸ ಸೋಂಕುಗಳು ಪ್ರಾರಂಭವಾಗುತ್ತಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಾತಾವರಣ ಬದಲಾಗುವುದರಿಂದ ಪ್ಯಾಥೋಜೆನ್​(ರೋಗಕಾರಕ ಜೀವಿಗಳು) ಉಲ್ಬಣಗೊಳ್ಳುತ್ತವೆ. ಈ ಪ್ಯಾಥೋಜೆನ್​ಗಳು ಮುಂದೊಂದು ದಿನ ಮನುಷ್ಯನ ದೇಹವನ್ನು ಸೇರಿಕೊಂಡು ಎಂದೂ ಕಂಡು ಕೇಳರಿಯದ ಭಯಾನಕ ಸೋಂಕುಗಳಿಗೆ ಕಾರಣವಾಗುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ಯಾಥೋಜೆನ್​ಗಳ ಪೈಕಿ ಎರಡು ಪ್ಯಾಥೋಜೆನ್​ಗಳು ಭಾರೀ ಅಪಾಯಕಾರಿಯಾಗಿದ್ದು.. ವಿಜ್ಞಾನಿಗಳು ಮೆದುಳನ್ನೇ ತಿನ್ನುವ ಅಮೀಬಾ(ನೇಗ್ಲೀರಿಯಾ ಫೋವ್ಲೆರಿ) ಹಾಗೂ ಮಾಂಸ ತಿನ್ನುವ ಬ್ಯಾಕ್ಟೀರಿಯಾ(ವೈಬ್ರಿಯೊ ವುಲ್ನಿಫಿಕಸ್) ಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿದ್ದಾರೆ.

ನೇಗ್ಲೀರಿಯಾ ಫೋವ್ಲೆರಿ ಅಮೀಬಾ ಅತ್ಯಂತ ವೇಗವಾಗಿ ಹರಡುವ ವೈರಾಣುವಾಗಿದ್ದು ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟಕರ. ಇದರಿಂದ ಶೀಘ್ರವೇ ಸಾವು ಸಂಭವಿಸುತ್ತದೆ. ಈ ಪ್ಯಾಥೋಜೆನ್​ಗಳು ಮೆದುಳಿಗೆ ಪ್ರವೇಶಿಸಿ ಅದನ್ನ ತಿನ್ನಲು ಪ್ರಾರಂಭಿಸುತ್ತವೆ. ಇದರ ಲಕ್ಷಣಗಳು ಸೋಕಿತನಲ್ಲಿ ಕಾಣಿಸಿಕೊಂಡರೂ ಅದಾಗಲೇ ಆತನ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ ಎನ್ನಲಾಗಿದೆ.

ಇದರಂತೆಯೇ ವೈಬ್ರಿಯೊ ವುಲ್ನಿಫಿಕಸ್ ತೆರೆದ ಗಾಯದ ಮೂಲಕ ದೇಹವನನ್ ಪ್ರವೇಶಿಸಿ ಮಾಂಸವನ್ನ ಸುತ್ತುವರಿಯುತ್ತವೆ ಎನ್ನಲಾಗಿದೆ.
ವಾತಾವರಣ ಬದಲಾದಂತೆ ಇಂಥ ಪ್ಯಾಥೋಜೆನ್​​ಗಳು ಬದುಕುಳಿಯುವ ಸಾಧ್ಯತೆಗಳೂ ಹೆಚ್ಚುತ್ತಾ ಹೋಗುತ್ತದೆ. ಬಹಳ ವರ್ಷಗಳ ಕಾಲ ಇಂಥ ಪ್ಯಾಥೋಜೆನ್​ಗಳು ಬೆಳೆಯುತ್ತಾ ಹೋಗುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಉತ್ತರ ಅಮೆರಿಕಾದಲ್ಲಿ ನೇಗ್ಲೀರಿಯಾ ಫೋವ್ಲೆರಿ ಸೋಂಕು ವಿರಳ ಎನ್ನಲಾಗಿದೆ ಆದರೆ ಕಳೆದ ಕೆಲವು ದಶಕಗಳಲ್ಲಿ ಈ ಭಾಗದಲ್ಲಿ ಕೆಲವು ಸೋಂಕು ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗಿವೆ ಎನ್ನಲಾಗಿದೆ.

The post ಮೆದುಳನ್ನೇ ಕಬಳಿಸುತ್ತಂತೆ ಅಮೀಬಾ: ವಿಜ್ಞಾನಿಗಳಿಂದ ಮತ್ತೊಂದು ಭಯಂಕರ ಸೋಂಕಿನ ವಾರ್ನಿಂಗ್ appeared first on News First Kannada.

Source: newsfirstlive.com

Source link