ಮೆದುಳು ಹೊರತಾಗಿ ವಿಜಯ್ ಹಾರ್ಟ್, ಕಿಡ್ನಿ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ-ವೈದ್ಯ

ಮೆದುಳು ಹೊರತಾಗಿ ವಿಜಯ್ ಹಾರ್ಟ್, ಕಿಡ್ನಿ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ-ವೈದ್ಯ

ಬೆಂಗಳೂರು: ಸಂಚಾರಿ ವಿಜಯ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಅರುಣ್ ನಾಯಕ್​.. ಸಂಚಾರಿ ವಿಜಯ್ ಇನ್ನೂ ಜೀವಂತವಾಗಿದ್ದಾರೆ. ಅವರ ಮೆದುಳು ಹೊರತಾಗಿ ಬೇರೆ ಎಲ್ಲ ಅಂಗಗಳೂ ಸಹ ಚೆನ್ನಾಗಿಯೇ ಕೆಲಸ ಮಾಡ್ತಿವೆ. ಬ್ರೇನ್ ಫೇಲ್ಯೂರ್ ಆಗಿರೋದು ನಿಜ.. ಬ್ರೇನ್ ಡೆಡ್ ಆಗಿದೆಯಾ ಅಂತ ಟೆಸ್ಟ್ ಮಾಡಬೇಕಿದೆ. ಬ್ರೇನ್ ಡೆಡ್ ಆದರೂ ಜೀವಂತವಾಗಿರ್ತಾರೆ.. ಇಂದು ಸಂಜೆ ಮತ್ತೊಂದು ಟೆಸ್ಟ್ ಆಗಲಿದೆ. ಆಗ ಬ್ರೇನ್ ಡೆಡ್ ಆಗಿದೆ ಅಂತ ಕನ್ಫರ್ಮ್ ಆದರೆ ಮುಂದುವರೆಯುತ್ತೇವೆ ಎಂದರು.

ಬ್ರೇನ್ ಡೆಡ್​ಗೂ ಬ್ರೇನ್ ಫೇಲ್ಯೂರ್​ಗೂ ಟೆಕ್ನಿಕಲಿ ವ್ಯತ್ಯಾಸವಿದೆ. ದಾನ ಮಾಡುವ ಅಂಗವನ್ನ ತೆಗೆಯುವಾಗ ಟೆಕ್ನಿಕಲಿ ಅವರ ಡೆತ್ ಆಗುತ್ತೆ. ಬ್ರೇನ್ ಡೆತ್ ಆದಾಗ ಡೆತ್ ಅತಂತ ಹೇಳಕ್ಕಾಗಲ್ಲ. ಹೃದಯ ನಿಂತರೆ ಅಷ್ಟೇ ಡೆತ್ ಅಂತ ನಿರ್ಧರಿಸುತ್ತೇವೆ, ಬ್ರೇನ್ ಡೆತ್ ಆದವರು ಬದುಕಲು ಸಾಧ್ಯವೇ ಇಲ್ಲ. ಎರಡನೇ ಟೆಸ್ಟ್ ಆದಮೇಲೆ ಏನು ಅನ್ನೋದನ್ನ ಡಿಕ್ಲೇರ್ ಮಾಡ್ತೇವೆ. ಎರಡನೇ ಡಿಕ್ಲರೇಷನ್ ಆದ ಮೇಲೆ ಅವರ ಬಗ್ಗೆ ಖಚಿತ ಮಾಹಿತಿ ಕೊಡ್ತೇವೆ ಅಂತ ವೈದ್ಯ ಅರುಣ್ ನಾಯಕ್ ಹೇಳಿದ್ದಾರೆ.

The post ಮೆದುಳು ಹೊರತಾಗಿ ವಿಜಯ್ ಹಾರ್ಟ್, ಕಿಡ್ನಿ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿವೆ-ವೈದ್ಯ appeared first on News First Kannada.

Source: newsfirstlive.com

Source link