ಮೆಲೋಡಿ ಗಾನದ ಜೊತೆ ಅದ್ಭುತ ದೃಶ್ಯಾವಳಿ -‘ಮದಗಜ’ನ ಗೆಳತಿ ಗೀತೆ ಕೇಳಿದ್ರಾ..?

ಮಾಸ್ ಪ್ರೀಯರಿಗೆ ಮಾತ್ರ ಹಬ್ಬದೂಟ ಎಂದೆನಿಸಿತ್ತು ಮದಗಜ ಸಿನಿಮಾದ ಪೋಸ್ಟರ್ ನೋಡಿದ ಅಂದಾಜುದಾರಿಗೆ. ಆದ್ರೆ ಈಗ ಮದಗಜ ಸಿನಿಮಾ ಬಳಗದಿಂದ ಹೊರ ಬಂದಿರೋ ಹೊಸ ಮೆಲೋಡಿ ಹಾಡು ಓಹೋ ಇದು ಮಾಸ್ ಮಾತ್ರ ಅಲ್ಲ ಬಾಸು ಇದು ಕ್ಲಾಸ್​ ಕೂಡ ಹೌದು ಎನ್ನುತ್ತಿದ್ದಾರೆ.

ಜೋಗಿ ಪ್ರೇಮ್ ನಂತರ ನಮ್ ಇಂಡಸ್ಟ್ರಿಯಲ್ಲಿ ಸಿನಿಮಾವನ್ನ ಹೇವಿ ಎವ್ವಿ ಎವ್ವಿ ಅನ್ನೋಂಗೆ ಪ್ರಚಾರ ಮಾಡೋರು ಎಸ್.ಮಹೇಶ್ ಕುಮಾರ್. ‘‘ಅಯೋಗ್ಯ’’ ಸಿನಿಮಾವನ್ನ ಮಾಡಿ ಗೆದ್ದಿರುವ ಮಹೇಶ್ ಕುಮಾರ್ ಈಗ ‘‘ಮದಗಜ’’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡ್ಕೊಂಡು ಪ್ರಚಾರದ ಮೈಕ್ ಸೆಟ್​​​ ಅನ್ನ ಆನ್ ಮಾಡಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ, ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನಟನೆಯ ‘‘ಮದಗಜ’’ ಸಿನಿಮಾ ರಿಲೀಸ್​ಗೆ ಸಿದ್ಧವಾಗುತ್ತಿದೆ. ರಿಲೀಸ್​ಗೂ ಮೊದ್ಲು ಒಂದಷ್ಟು ವಂಡರ್​​ಫುಲ್ ಸಾಂಗ್ಸ್​ಗಳನ್ನ ಹೊರ ಬಿಟ್ಟು ಪ್ರೇಕ್ಷಕರನ್ನ ಅಲರ್ಟ್ ಮಾಡೋ ಉದ್ದೇಶದಿಂದ ಮದಗಜ ಸಿನಿಮಾ ಬಳಗದಿಂದ ಒಂದು ಮಸ್ತ್ ಮೆಲೋಡಿ ಗಾನ ಬಜಾನ ಹೊರ ಬಂದಿದೆ.

ಉಮಾಪತಿ ಶ್ರೀನಿವಾಸ್ ನಿರ್ಮಾಣದ ಅದ್ಧೂರಿ ಸಿನಿಮಾ ‘‘ಮದಗಜ’’. ಈ ಬಿಗ್ ಮೂವಿಯ ಒಂದು ಮೆಲೋಡಿ ಹಾಡು ಇಂದು ರಿಲೀಸ್ ಆಗಿರೋ ‘‘ಗೆಳೆಯ ನೀನು’’ ಅನ್ನೋ ಸಾಲಿನಿಂದ ಶುರುವಾಗೋ ಹಾಡು. ತೆರೆಯ ಮೇಲೆ ಆಶಿಕಾ ಕಂಗೋಳಿಸುವ ಈ ಹಾಡಿನ ಅಂತರಾಳದಲ್ಲಿ ಚೇತನ್ ಕುಮಾರ್ ಸಾಹಿತ್ಯವಿದೆ ರವಿ ಬಸ್ರೂರ್ ಸಂಗೀತ ಅಡಗಿದೆ ವೈಷ್ಣವಿ ಕಣ್ಣನ್ ಅವರ ಕಂಠಸಿರಿ ಮೊಳಗಿದೆ.
ಪೋಸ್ಟ್ ಪೋಡಕ್ಷನ್​​ನಲ್ಲಿ ಬ್ಯುಸಿ ಇರೋ ಮದಗಜ ಸಿನಿಮಾ ತಂಡ ಡಬ್ಬಿಂಗು ಎಡಿಟಿಂಗು ಡಿ.ಐ ಅಂತೆಲ್ಲ ಬ್ಯುಸಿಯಾಗಿದೆ. ಈ ವರ್ಷದ ಡಿಸೆಂಬರ್ ತಿಂಗಳ ಮೊದಲ ವಾರದಲ್ಲೇ ಪ್ರೇಕ್ಷಕರ ಮುಂದೆ ಬಂದು ನಿಲ್ಲಲು ಪ್ಲಾನ್ ಮಾಡಿಕೊಂಡಿದೆ ‘‘ಮದಗಜ’’ ಫಿಲ್ಮ್ ಟೀಮ್. ಸಿನಿಮಾದ ಹೊರ ನೋಟ ನೋಡ್ತಿದ್ರೆ ಖಂಡಿತವಾಗಿ ಏನೋ ಒಂದು ಮೋಡಿ ಮಾಡೇ ಮಾಡುತ್ತೆ ಮದಗಜ ಎಂದೆನಿಸುತ್ತಿದೆ.

The post ಮೆಲೋಡಿ ಗಾನದ ಜೊತೆ ಅದ್ಭುತ ದೃಶ್ಯಾವಳಿ -‘ಮದಗಜ’ನ ಗೆಳತಿ ಗೀತೆ ಕೇಳಿದ್ರಾ..? appeared first on News First Kannada.

News First Live Kannada

Leave a comment

Your email address will not be published. Required fields are marked *