ಮೇಕಪ್​ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್​ | Little girl cute react after she wears makeup video goes viral


ಮೇಕಪ್​ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್​

ಮೇಕಪ್​ ಮಾಡಿಕೊಂಡ ಪುಟ್ಟ ಬಾಲಕಿ

ಸಾಮಾಜಿಕ ಜಾಲತಾಣ ಒಂದಲ್ಲ ಒಂದು ಕ್ಯೂಟ್​ ವಿಡಿಯೋ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತದೆ. ಈಗಾಗಲೇ ಸಾಕಷ್ಟು ಪ್ರಾಣಿ, ಪಕ್ಷಿಗಳ ವಿಡಿಯೋ ವೈರಲ್​ ಆಗಿವೆ. ಇದೀಗ ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿ ಮೇಕಪ್ (Makeup)​ ಮಾಡಿಕೊಂಡು ಕನ್ನಡಿಯನ್ನು ನೋಡಿದಾಗ ಆಕೆಯ ಪ್ರತಿಕ್ರಿಯೆಯ ವಿಡಿಯೋ ವೈರಲ್​ ಆಗಿದೆ. ಮಗಳಿಗೆ ಮೇಕಪ್​ ಮಾಡಿ ನಂತರ ಕನ್ನಡಿಯನ್ನು ಆಕೆಯ ಎದುರು ಹಿಡಿದು ತಾಯಿ ತೋರಿಸುತ್ತಾಳೆ. ಆಗ ಆಕೆ ಅವಳ ಮುಖವನ್ನೇ ನೋಡಿ ಅಚ್ಚರಿಗೊಳ್ಳುತ್ತಾಳೆ. ಇನ್ಸ್ಟಾಗ್ರಾಮ್​ (Instagram)ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬ್ರಿಟ್ಟಿಕ್ರಿಟ್ಟಿ (brittikitty) ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು 2 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ಕ್ಯೂಟ್​ ಎಂದಿದ್ದಾರೆ.

ವಿಡಿಯೋದಲ್ಲಿ ಪುಟ್ಟ ಬಾಲಕಿಯು ಹಸಿರು, ಬಿಳಿ ಬಣ್ಣದ ಫ್ರಾಕ್​ ಧರಿಸಿ ಕುಳಿತಿರುತ್ತಾಳೆ. ಆಕೆಗೆ ಅವಳ ಅಮ್ಮ ಲಿಪ್​ಸ್ಟಿಕ್, ಐಲ್ಯಾಷ್​, ಐಶ್ಯಾಡೋ, ಮಸ್ಕರಾ ಎಲ್ಲವನ್ನೂ  ಹಚ್ಚುತ್ತಾಳೆ. ಈ ವೇಳೆ ಬಾಲಕಿ ಕಣ್ಣನ್ನು ಆಗಾಗ ಮಿಟುಕಿಸುತ್ತಾಳೆ. ಆಗ ಆಕೆಯ ತಾಯಿ ನೋ ಎಂದು ಸುಮ್ಮನಿರಿಸುತ್ತಾಳೆ. ಅಮ್ಮ ಮಗಳ ಈ ಕ್ಯೂಟ್​ ವಿಡಿಯೋ ಒಂದೆಡೆ ನೆಟ್ಟಿಗರನ್ನು ಸೆಳೆದರೆ, ವಿಡಿಯೋದ ಕೊನೆಯಲ್ಲಿ ಕನ್ನಡಿಯೆದರು ನಿಂತಾಗ ಬಾಲಕಿ ಆಕೆಯದ್ದೇ ಸುಂದರವಾದ  ಮುಖವನ್ನು ಕಂಡು ಅಚ್ಚರಿಯಿಂದ ಕಣ್ಣರಳಿಸಿ  ಓಹ್​ ಸ್ಕೇರಿ (Oh! I scary!) ಎನ್ನುತ್ತಾಳೆ. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋ ನೋಡಿ ನೆಟ್ಟಿಗರು ಬಾಲಕಿಯನ್ನು ಅಂದವನ್ನು ಹೊಗಳಿದ್ದಾರೆ. ಆಕೆಯ ಕಣ್ಣು ಲ್ಯಾಶಸ್​ಗಳಿಂದ ಸುಂದರವಾಗಿ ಕಾಣುತ್ತಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದರೆ, ಇನ್ನೊಬ್ಬರು ಸುಂದರವಾಗಿ ಕಾಣಿಸುತ್ತಿದ್ದಾಳೆ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *