ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆಗೆ ಪಾಸಿಟಿವ್​


ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೈ ಕಲಿಗಳಿಗೆ ಕೋವಿಡ್​ ಕಾಟ ಮುಂದುವರೆದಿದೆ. ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಬೆನ್ನಲ್ಲೇ ಇದೀಗ ಪುತ್ರ ಪ್ರಿಯಾಂಕ್​ ಖರ್ಗೆಗೆ ಕೋವಿಡ್​ ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ತಿಳಿಸಿದ ಪ್ರಿಯಾಂಕ್ ಖರ್ಗೆ ಕೋವಿಡ್ ಸೋಂಕು ತಗುಲಿರೋದನ್ನ ಧೃಡಪಡಿಸಿದ್ದಾರೆ. ಜೊತೆಗೆ ತಮ್ಮ ಸಂಪರ್ಕಕ್ಕೆ ಬಂದಿರುವವರು ಅಗತ್ಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇತ್ತೀಚಿಗೆ ಮಲ್ಲಿಕಾರ್ಜುನ್​ ಖರ್ಗೆ ಅವರಿಗೂ ಪಾದಯಾತ್ರೆಯ 3ನೇ ದಿನದ ಬಳಿಕ ಸೋಂಕು ತಗುಲಿತ್ತು.

 

 

The post ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆಗೆ ಪಾಸಿಟಿವ್​ appeared first on News First Kannada.

News First Live Kannada


Leave a Reply

Your email address will not be published. Required fields are marked *