ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ | Karnataka Police tests Positive for Covid19 Coronavirus Third Wave updates Karnataka News


ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಹೋಗಿದ್ದವರಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರಗೆ ಕೊರೊನಾ ಪಾಸಿಟಿವ್ ಖಚಿತವಾಗಿದೆ. ಜಯಚಂದ್ರ, ಸದ್ಯ ಬೆಂಗಳೂರಿನ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಮೇಕೆದಾಟು ಪಾದಯಾತ್ರೆ ಬಂದೋಬಸ್ತ್​ಗೆ ಹೋದ ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಕೋಲಾರ ಜಿಲ್ಲೆಯ 32 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿದೆ. ಕೆಜಿಎಫ್ ಜಿಲ್ಲೆಯಿಂದ ತೆರಳಿದ್ದ 111 ಜನ ಪೊಲೀಸರ ಪೈಕಿ 25 ಜನ ಸಿಬ್ಬಂದಿಗೆ ಕೊವಿಡ್19 ದೃಢವಾಗಿದೆ. ಇದರಿಂದ ಪೊಲೀಸರ ಕುಟುಂಬಸ್ಥರಿಗೆ ಆತಂಕ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿ, ನಂತರ ಪೊಲೀಸ್ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಲು ಸೂಚನೆ ಕೊಡಲಾಗಿದೆ. ಕೋಲಾರ ಡಿಹೆಚ್ಓ ಡಾ. ಜಗದೀಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಬೆಂಗಳೂರಿಗೆ ಬಂದಿದ್ದ 15 ಜನರಿಗೆ ಕೊರೊನಾ ಕಂಡುಬಂದಿದೆ. ಶನಿವಾರ ಬೆಳಗ್ಗೆ ಕೆಐಎಬಿಗೆ ಆಗಮಿಸಿದ್ದ 15 ಜನರಿಗೆ ಕೊರೊನಾ  ದೃಢಪಟ್ಟಿದ್ದು ನಿಗದಿತ ಕೋವಿಡ್ ಸೆಂಟರ್​ಗಳಲ್ಲಿ‌ ಐಸೊಲೇಷನ್ ಮಾಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 10 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿದೆ. ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ, ಹಂಪಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ವಿಜಯನಗರ ಎಸ್‌ಪಿ ಡಾ.ಕೆ. ಅರುಣ್ ಮಾಹಿತಿ ನೀಡಿದ್ದಾರೆ.

ಪಾದಯಾತ್ರೆಗೆ ನಿಯೋಜನೆಯಾಗಿದ್ದ 10 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಕಾಂಗ್ರೆಸ್​ ಪಾದಯಾತ್ರೆ ಭದ್ರತೆಗೆ ನಿಯೋಜನೆಯಾಗಿದ್ದ ರಾಮನಗರ ಜಿಲ್ಲೆಯ 10 ಪೊಲೀಸರಿಗೆ ಕೊರೊನಾ ಪಾಸಿಟಿವ್​ ದೃಢವಾಗಿದೆ. ಇನ್ನೂ ಕೆಲವರ ಕೊವಿಡ್​ ಟೆಸ್ಟ್​ ರಿಪೋರ್ಟ್​ ನಾಳೆ ಬರಲಿದೆ ಎಂದು ಟಿವಿ9ಗೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್​ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ: 1 ರಿಂದ 10ನೇ ತರಗತಿ ಭೌತಿಕ ಪಾಠ ಸ್ಥಗಿತಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಒತ್ತಾಯ

ಶಿವಮೊಗ್ಗ 1 ರಿಂದ 10ನೇ ತರಗತಿ ಭೌತಿಕ ಪಾಠ ಸ್ಥಗಿತಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಒತ್ತಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನವಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಳ ಹಿನ್ನಲೆ ದಿನೇದಿನೆ ಶಾಲೆ, ಕಾಲೇಜ್, ವಸತಿ ಶಾಲೆಯ ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಪತ್ತೆ ಆಗುತ್ತಿವೆ. ಕೊರೊನಾ ನಡುವೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಸಾವಿರಾರು ಕೊರೊನಾ ಕೇಸ್ ಪತ್ತೆಯಾದರೂ ಆಸ್ಪತ್ರೆಗೆ, ಆಕ್ಸಿಜನ್ ಬೆಡ್, ಐಸಿಯು ಬೆಡ್​ ದಾಖಲಾತಿ ಕಡಿಮೆ

ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಸಿದ್ಧತೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ವಾರ ಮತ್ತೊಂದು ಸಭೆ ನಡೆಯಲಿದೆ. ಫೆಬ್ರವರಿಯಿಂದ ಲಾಕ್​​ಡೌನ್ ಮಾಡುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. ಕೊವಿಡ್ ವಿಚಾರದಲ್ಲಿ ಸೇಫ್ ಜೋನ್​​ನಲ್ಲಿರುವ ಲೆಕ್ಕಾಚಾರ ಕೇಳಿಬಂದಿದೆ. ಸಾವಿರಾರು ಕೇಸ್ ಪತ್ತೆಯಾದರೂ ಆಸ್ಪತ್ರೆಗೆ ದಾಖಲಾತಿ ಕಡಿಮೆ ಇದೆ. 2 ವಾರದ ಆಸ್ಪತ್ರೆ ದಾಖಲಾತಿ ನೋಡಿದ್ರೆ ಸದ್ಯಕ್ಕೆ ಆತಂಕವಿಲ್ಲ. ಇನ್ನೂ ಎರಡು ವಾರ ರಾಜ್ಯ ಸರ್ಕಾರ ಕಾದು ನೋಡಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈಗ ಟ್ರೆಂಡ್ ನೋಡಿದ್ರೆ ರಾಜ್ಯಕ್ಕಿಲ್ಲ 3ನೇ ಅಲೆ ತೀವ್ರತೆ ಆತಂಕ ಎಂದು ಹೇಳಲಾಗಿದೆ.

ಆಸ್ಪತ್ರೆ ದಾಖಲಾತಿ ನೋಡಿದ್ರೆ ಯಾವುದೇ ಆತಂಕ ಇಲ್ಲ. ಆಕ್ಸಿಜನ್ ಬೆಡ್, ಐಸಿಯು ಬೆಡ್​ನಲ್ಲಿ ದಾಖಲಾತಿ ಹೆಚ್ಚುತ್ತಿಲ್ಲ. ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್​ನ ಅನಿವಾರ್ಯತೆ ಕಾಣ್ತಿಲ್ಲ. ಲಸಿಕೆ ತೆಗೆದುಕೊಳ್ಳಿ, ಕೊರೊನಾ ಆತಂಕ ಬಿಡಿ, ಎಚ್ಚರಿಕೆಯಿಂದ ಇರಿ. ಇದೇ ಮೂರನೇ ಅಲೆ ಗೆಲ್ಲುವ ಸುಲಭ ದಾರಿ ಎಂದು ತಿಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *