ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ವಿಚಾರಕ್ಕೆ ಬಿಜೆಪಿ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ.. ಕಾಂಗ್ರೆಸ್‌ನವರು ರಾಜಕಾರಣಕ್ಕೆ ಮೇಕೆದಾಟು ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಿಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಬದ್ಧತೆ ಇಲ್ಲದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ನವರು ನಾವು ಜಾತಿವಾದಿಗಳು ಅಂತ ಆರೋಪ ಮಾಡಿದ್ದಾರೆ. ನಾವು ಜಾತಿವಾದಿಗಳಾಗಿದ್ದಕ್ಕೆ ಹಾಜಬ್ಬ ಅಂತಹವರಿಗೆ ಪದ್ಮ ಪ್ರಶಸ್ತಿ ಕೊಟ್ಟಿದ್ದು. ಇವರ ಮನಸಲಿ ಕೊಳಕು ತುಂಬಿಕೊಂಡಿದೆ. ಎಲ್ಲವೂ ಕೊಳಕು ಕೊಳಕಾಗಿಯೇ ಕಾಣುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ತಮಿಳುನಾಡು ವಿರುದ್ಧ ಸಿದ್ದರಾಮಯ್ಯ ಗುಡುಗು; ಮೇಕೆದಾಟು ಯೋಜನೆಗಾಗಿ ‘ಪಾದಯಾತ್ರೆ’
ಬಿಟ್ ಕಾಯಿನ್ ದಂಧೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಹಲವು ದಿನಗಳಿಂದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಬಳಿ ಆಧಾರ ಇದ್ರೆ ತನಿಖಾ ದಳಕ್ಕೆ ಕೊಡಲಿ. ಶ್ರೀಕಿ ಬಂಧನ ಮಾಡಿದ್ದು ಕಾಂಗ್ರೆಸ್‌ನವರು. ವಿಚಾರಣೆ ಮಾಡಿದ್ದು ಬಿಜೆಪಿ. ಅದಕ್ಕೂ ಮೊದಲು ಮಲ್ಯ ಟವರ್ನಲ್ಲಿ ಶ್ರೀಕಿ ಯಾರ ಜತೆ ಮಜಾ ಮಾಡ್ಕೊಂಡಿದ್ದ? ಯಾವ ಕಾಂಗ್ರೆಸ್ ನಾಯಕರ ಮಗನ ಜತೆ ಇದ್ದ ಅಂತ ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ಕಾಂಗ್ರೆಸ್ ಒತ್ತಡ ಹೇರುವ ತಂತ್ರ ಅನುಸರಿಸ್ತಿದೆ -ಬೊಮ್ಮಾಯಿ ಕಿಡಿ
The post ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ‘ಕಾಂಗ್ರೆಸ್ಗೆ ಬದ್ಧತೆ ಇಲ್ಲ’ ಎಂದು ಸಿಟಿ ರವಿ ಆಕ್ರೋಶ appeared first on News First Kannada.