ಶಿವಮೊಗ್ಗ: ಇತ್ತೀಚೆಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮುಂದುವರಿಸಬೇಡಿ ಎಂದು ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಸ್ಟಾಲಿನ್ ವಿನಂತಿಸಿದ್ದರು. ಈ ಬೆನ್ನಲ್ಲೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸಿಎಂ ಎಂಕೆ ಸ್ಟಾಲಿನ್​​ಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕದ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ನಿಲ್ಲಿಸಿ ಎಂದು ಈಶ್ವರಪ್ಪ ತಪರಾಕಿ ಬಾರಿಸಿದ್ದಾರೆ.

ಎಂಕೆ ಸ್ಟಾಲಿನ್ ಮೇಕೆದಾಟು ಯೋಜನೆ ನಿಲ್ಲಿಸಿ ಎಂದು ಸಿಎಂಗೆ ಬರೆದ ಪತ್ರದ ಬಗ್ಗೆ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ಎಲ್ಲಿಯವರೆಗೂ ಆಕಾಶದಿಂದ ಮಳೆ ಬರಲಿದೆಯೋ, ಅಲ್ಲಿವರೆಗೂ ತಮಿಳುನಾಡಿಗೆ ರಾಜಕೀಯ ಮಾಡುವುದೊಂದೇ ಉದ್ಯೋಗ. ತಮಿಳುನಾಡು ಕರ್ನಾಕದ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ ಎಂದರು.

ಕರ್ನಾಟಕದಿಂದ ಎಲ್ಲಿಯವರೆಗೂ ತಮಿಳುನಾಡುಗೆ ನೀರು ಹರಿಯಲಿದೆಯೋ ಅಲ್ಲೀತನಕ ರಾಜಕೀಯ ಮಾಡುತ್ತಲೇ ಇರುತ್ತಾರೆ. ನಮ್ಮ ರಾಜ್ಯದಿಂದ ನೀರು ತೆಗೆದುಕೊಳ್ಳೋ ತಮಿಳುನಾಡು ನ್ಯಾಯವಾಗಿ ಕರ್ನಾಟಕದ ಋಣ ತೀರಿಸಬೇಕು. ನಮಗೂ ಕೋರ್ಟ್, ಕಾನೂನು ಮತ್ತು ಸಂವಿಧಾನದ ಮೇಲೆ ಗೌರವ ಇದೆ. ಹೀಗಾಗಿಯೇ ಕೋರ್ಟ್ ತೀರ್ಮಾನದಂತೆ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದೆ ನಡೆದುಕೊಳ್ಳುತ್ತಿದ್ದೇವೆ ಎಂದು ಕಿರಿಕಾಡಿದರು.

ಮೇಕೆದಾಟು ಯೋಜನೆ ನಾವೇ ಪ್ರಾರಂಭಿಸಿಲ್ಲ, ಬದಲಾಗಿ ಕೋರ್ಟ್ ಆದೇಶ ಬಂದ ಮೇಲೆಯೇ ಶುರು ಮಾಡಿದ್ದೇವೆ. ನಾವು ಕೋರ್ಟ್ ಕಾನೂನಿಗೆ ಗೌರವ ನೀಡಿದಂತೆಯೇ ತಮಿಳುನಾಡು ಕೂಡ ನಡೆದುಕೊಳ್ಳಬೇಕು ಎಂದು ಕರ್ನಾಟಕದ ಪರವಾಗಿ ಫುಲ್ ಬ್ಯಾಂಟಿಗ್ ಮಾಡಿದರು.

The post “ಮೇಕೆದಾಟು ಯೋಜನೆ ನಿಲ್ಲಿಸಿ” ಎಂದ ತಮಿಳುನಾಡು ಸಿಎಂಗೆ ಕೆ.ಎಸ್ ಈಶ್ವರಪ್ಪ ತಪರಾಕಿ appeared first on News First Kannada.

Source: newsfirstlive.com

Source link