ಮೇಕೆದಾಟು ಯೋಜನೆ ನೂರಕ್ಕೆ ನೂರು ಅನುಷ್ಠಾನವಾಗುತ್ತೆ -ಮೋದಿ ಭೇಟಿಗೂ ಮುನ್ನ ಸಿಎಂ ಹೇಳಿಕೆ

ಮೇಕೆದಾಟು ಯೋಜನೆ ನೂರಕ್ಕೆ ನೂರು ಅನುಷ್ಠಾನವಾಗುತ್ತೆ -ಮೋದಿ ಭೇಟಿಗೂ ಮುನ್ನ ಸಿಎಂ ಹೇಳಿಕೆ

ದೆಹಲಿ: ಸಿಎಂ ಬಿ.ಎಸ್​​.ಯಡಿಯೂರಪ್ಪ ಅವರು ಇಂದು ದೆಹಲಿಗೆ ಭೇಟಿ ನೀಡಿದ್ದಾರೆ. ದೆಹಲಿಗೆ ಆಗಮಿಸುತ್ತಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಪ್ರಮುಖ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ.. ಆರು ತಿಂಗಳ ಬಳಿಕ ದೆಹಲಿ ಬಂದಿದ್ದೇನೆ. ಇಂದು ಆರೂವರೆ ಗಂಟೆಯ ನಂತರ ಪ್ರಧಾನಿ ಭೇಟಿಯಾಗುತ್ತಿದ್ದು, ಆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಹೊಸ ಕೇಂದ್ರ ಸಚಿವರ ಭೇಟಿ ಮಾಡಿ ರಾಜ್ಯಕ್ಕೆ ಸಿಗಬೇಕಾದ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಇತ್ತ ಇಂದು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ತಮಿಳುನಾಡು ಸರ್ವ ಪಕ್ಷ ನಿಯೋಗ ಭೇಟಿ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಯೋಜನೆಯಿಂದ ತಮಿಳುನಾಡಿಗೆ ಸಮಸ್ಯೆ ಇಲ್ಲ. ಈ ಬಗ್ಗೆ ನಾನು ಸಿಎಂ ಸ್ಟಾಲಿನ್​ ಅವರಿಗೆ ಪತ್ರವನ್ನು ಬರೆದಿದ್ದೇನೆ. ಆದರೆ ಅವರು ಹಠ ಬಿಡ್ತಾ ಇಲ್ಲ. ಅವರು ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾರೆ. ಆದರೆ ನೂರಕ್ಕೆ ನೂರು ಯೋಜನೆ ಅನುಷ್ಠಾನವಾಗುತ್ತೆ ಎಂದು ಸ್ಪಷ್ಟಪಡಿಸಿದರು.

The post ಮೇಕೆದಾಟು ಯೋಜನೆ ನೂರಕ್ಕೆ ನೂರು ಅನುಷ್ಠಾನವಾಗುತ್ತೆ -ಮೋದಿ ಭೇಟಿಗೂ ಮುನ್ನ ಸಿಎಂ ಹೇಳಿಕೆ appeared first on News First Kannada.

Source: newsfirstlive.com

Source link