ಚೆನ್ನೈ: ಮೇಕೆದಾಟು ಯೋಜನೆ ಸಂಬಂಧ ಸಿಎಂ ಬಿ.ಎಸ್.​ ಯಡಿಯೂರಪ್ಪ ಬರೆದಿದ್ದ ಪತ್ರಕ್ಕೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​​ ಪ್ರತಿಕ್ರಿಯೆ ನೀಡಿ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎಂಕೆ ಸ್ಟಾಲಿನ್​​.. ಕರ್ನಾಟಕದ ಜನತೆಗೆ ನನ್ನ ಸಮಸ್ಕಾರಗಳು. ತಮಿಳುನಾಡು ಮತ್ತು ಕರ್ನಾಟಕ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಆಶಿಸುವೆ. ಹೀಗಾಗಿ, ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮುಂದುವರಿಸಬೇಡಿ ಎಂದು ವಿನಂತಿಸಿದ್ದಾರೆ.

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪನವರು ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ನಮ್ಮ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸ್ಟಾಲಿನ್​​ಗೆ ಪತ್ರ ಬರೆದಿದ್ದರು. ಇದೀಗ ದಿನವೇ ಸ್ಟಾಲಿನ್​​ ಯಡಿಯೂರಪ್ಪವರಿಗೆ ಈ ಯೋಜನೆ ಮುಂದುವರಿಸಬೇಡಿ ಎಂದು ಪತ್ರ ಬರೆದಿರುವುದು ಗಮನಾರ್ಹವಾಗಿದೆ.

ವಿದ್ಯುತ್ ಉತ್ಪಾದನೆಗೆ ಉನ್ನತ ನ್ಯಾಯಾಲಯ ಅವಕಾಶ ನೀಡಿದ್ದ ಕಾರಣ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ನೀವು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದೀರಿ. 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಅವಕಾಶವಿದೆ. ಹೀಗಾಗಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಈ ಯೋಜನೆ ಮುಂದುವರಿಸುವುದಾಗಿ ತಿಳಿಸಿದ್ದೀರಿ. ನಮ್ಮಲ್ಲೂ ನೀರಿಲ್ಲ. ನಾವು ಪ್ರತಿನಿತ್ಯ ನೀರಿಗಾಗಿ ಪರದಾಡುತ್ತಿದ್ದೇವೆ. ನಿಮ್ಮ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಸಮಂಜಸವಲ್ಲ ಎಂದು ಸ್ಟಾಲಿನ್​​​ ಹೇಳಿದ್ದಾರೆ.

ಇನ್ನು, ಕರ್ನಾಟಕದ ಯೋಜನೆಯಿಂದ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಇದರಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಯಡಿಯೂರಪ್ಪ ಬರೆದ ಪತ್ರದಲ್ಲಿ ಹೇಳಲಾಗಿತ್ತು. ಈಗ ಇದಕ್ಕೆ ಪ್ರತಿಯಾಗಿ ಬರೆದಿರುವ ಪತ್ರದಲ್ಲಿ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮುಂದುವರಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

The post ಮೇಕೆದಾಟು ಯೋಜನೆ ಮುಂದುವರೆಸಬೇಡಿ -ಬಿಎಸ್​ವೈಗೆ ಎಂ.ಕೆ. ಸ್ಟಾಲಿನ್​​ ಪತ್ರ appeared first on News First Kannada.

Source: newsfirstlive.com

Source link