ಕೊರೊನಾ ಮಾರಿಗೆ ಬ್ರೇಕ್ ಹಾಕಲೇಬೇಕು ಅಂತಾ ಸರ್ಕಾರ ಲಾಕ್​ಡೌನ್ ವಿಧಿಸಿದೆ. ಇದ್ರಿಂದಾಗಿ ಸಾಮಾನ್ಯ ಜನರ ಬದುಕಿಗೆ ಪೆಟ್ಟು ಬೀಳುತ್ತಿದೆ. ಕೊರೊನಾ ವಿರುದ್ಧ ಹೋರಾಡುವುದರ ಜೊತೆಗೆ ತಮ್ಮ ಕುಟುಂಬ, ಆಸ್ತಿ, ತಾವು ಸಾಕಿರುವ ಪ್ರಾಣಿ, ಪಕ್ಷಿಗಳನ್ನ ಕಾಪಾಡಿಕೊಳ್ಳೋದು ಸಹ ಸವಾಲಿನ ಕೆಲಸವಾಗಿಬಿಟ್ಟಿದೆ. ಅದರಂತೆ ಧಾರವಾಡದ ಅಜ್ಜಿಯೊಬ್ಬಳು, ತನ್ನ ಮುದ್ದಿನ ಮೇಕೆ ಮರಿಗೆ ಚಿಕಿತ್ಸೆ ಕೊಡಿಸಲು, ಮೂರು ಕಿಲೋ ಮೀಟರ್ ದೂರದವರೆಗೆ ಹೊತ್ತುಕೊಂಡು ಬಂದ ದೃಶ್ಯ ಮನಕಲಕುವಂತಿತ್ತು..

ಹೌದು.. ಧಾರವಾಡ ಹೊರವಲಯದ ಹೆಬ್ಬಳ್ಳಿ ಅಗಸಿಯ ನಿವಾಸಿಯಾಗಿರುವ ಶಂಕ್ರವ್ವ ಅನ್ನೋ ವೃದ್ಧೆಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ಗಾಯಮಾಡಿಕೊಂಡಿದ್ದ ಮೇಕೆ ಮರಿಗೆ ಚಿಕಿತ್ಸೆ ಕೊಡಿಸಲು ದವಾಖಾನೆ ಹುಡುಕಿಕೊಂಡು ಹೊರಟಿದ್ದರು. ಲಾಕ್​ಡೌನ್ ಹಾಗೂ ಕೊರೊನಾ ಆತಂಕವನ್ನೂ ಲೆಕ್ಕಿಸದೇ, ಹೇಗಾದರೂ ಮಾಡಿ ಮೇಕೆ ಮರಿಯನ್ನ ಬಚಾವ್ ಮಾಡಿಕೊಳ್ಳಲೇಬೇಕು ಅನ್ನೋ ಸಂಕಲ್ಪ ಹೊತ್ತು ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಮೇಕೆ ಮರಿಯನ್ನ ಹೊತ್ತು ತಂದಿದ್ದಾರೆ.

ಏನಾಗಿತ್ತು ಮೇಕೆಗೆ..?
ತಮಗೆ ಸುಸ್ತಾದಾಗ ದಾರಿ ಮಧ್ಯದಲ್ಲಿ ಕೂತು, ಮೇಕೆಗೆ ತಿನ್ನಲು ಸೊಪ್ಪನ್ನ ನೀಡುತ್ತ, ತಾವು ದಣಿವನ್ನ ಆರಿಸಿಕೊಂಡು ಆಸ್ಪತ್ರೆ ಮುಟ್ಟಿದ್ದಾರೆ. ಕೊನೆಗೂ ವೃದ್ಧೆ ವೈದ್ಯರ ಬಳಿ ಮೇಕೆಗೆ ಚಿಕಿತ್ಸೆ ಕೊಡಿಸಿಕೊಂಡು ವಾಪಸ್ ಆಗಿದ್ದಾರೆ. ವೃದ್ಧೆ ಶಂಕ್ರವ್ವ ಹೇಳುವಂತೆ..‘ಊರಲ್ಲಿ ಡಾಂಬರ ರಸ್ತೆ ಆಗುತ್ತಿತ್ತು. ಈ ರಸ್ತೆ ಕೆಲಸ ಮಾಡೋರು ಡಾಂಬರವನ್ನ ದೊಡ್ಡ ಡ್ರಮ್​ನಲ್ಲಿ ತುಂಬಿಟ್ಟಿದ್ದರು. ನನ್ನ ಈ ಮೇಕೆ ಅಲ್ಲಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಡಾಂಬರದೊಳಗೆ ಬಿದ್ದು ಬಿಟ್ಟಿದೆ. ಇದರಿಂದಾಗಿ ಮೇಕೆ ಸುಟ್ಟು ಹೋಗಿದೆ.. ಹೀಗಾಗಿ ಚಿಕಿತ್ಸೆ ಕೊಡಿಸುವ ಅಂತಾ ದವಾಖಾನೆಗೆ ಹೋಗುತ್ತಿದ್ದೇನೆ’

The post ಮೇಕೆ ಉಳಿಸಿಕೊಳ್ಳಲು ಅಜ್ಜಿ ಹೋರಾಟ.. ಕೊರೊನಾ ಲೆಕ್ಕಿಸದೇ 3 ಕಿ.ಮೀ ದೂರ ಹೊತ್ತು ಸಾಗಿದ ವೃದ್ಧೆ appeared first on News First Kannada.

Source: newsfirstlive.com

Source link