ಮೇಘಾಲಯವನ್ನು ಕಾಂಗ್ರೆಸ್ ಮುಕ್ತ ಮಾಡಿದ ದೀದಿ; ಮಾಜಿ ಸಿಎಂ ನೇತೃತ್ವದಲ್ಲಿ TMC ಸೇರಿದ ಶಾಸಕರು


ಮೇಘಾಲಯದಲ್ಲಿ ಪ್ರಮುಖ ವಿಪಕ್ಷವಾಗಿದ್ದ ಕಾಂಗ್ರೆಸ್​ಗೆ ದೊಡ್ಡ ಶಾಕ್ ಅನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜೀ ನೀಡಿದ್ದು, ಮಾಜಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಟಿಎಂಸಿ ಸೇರಿದ್ದಾರೆ.

60 ಶಾಸಕರ ಬಲ ಹೊಂದಿರೋ ಮೇಘಾಲಯದಲ್ಲಿ 40 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರದಲ್ಲಿದ್ದರೆ, 17 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಪ್ರಮುಖ ವಿಪಕ್ಷವಾಗಿತ್ತು. ಆದ್ರೆ ನಿನ್ನೆ ರಾತ್ರೋರಾತ್ರಿ ಕಾಂಗ್ರೆಸ್​ನ 17 ಶಾಸಕರಲ್ಲಿ 11 ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಅರ್ಧಕ್ಕಿಂತ ಹೆಚ್ಚು ಶಾಸಕರು ಪಕ್ಷಾಂತರ ಮಾಡುತ್ತಿರೋ ಕಾರಣದಿಂದಾಗಿ, ಪಕ್ಷಾಂತರ ನಿಷೇಧ ಕಾಯ್ದೆ ಕೂಡ ಇಲ್ಲ ಅನ್ವಯವಾಗಲ್ಲ. ಹೀಗಾಗಿ ಕಾಂಗ್ರೆಸ್​ಗೆ ದೊಡ್ಡ ಶಾಕ್​​ ಅನ್ನು ದೀದಿ ನೀಡಿದ ಹಾಗೆ ಆಗಿದೆ.

ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರ ನೇತೃತ್ವದಲ್ಲಿ ಪಕ್ಷಾಂತರಕ್ಕೆ ನಿರ್ಧರಿಸಿದ ಶಾಸಕರು, ಮೇಘಾಲಯ ವಿಧಾನಸಭೆ ಸ್ಪೀಕರ್ ಮೆಟ್​​ಬಾ ಲಿಂಗ್ಡೋ ಅವರಿಗೆ ಪತ್ರದ ಮೂಲಕ ಈ ಸಂಗತಿಯನ್ನು ತಿಳಿಸಿದ್ದಾರೆ.  ಇನ್ನು ಮೇಘಾಲಯದಲ್ಲಿ ಅಸ್ತಿತ್ವವೇ ಇಲ್ಲದ ತೃಣ ಮೂಲ ಕಾಂಗ್ರೆಸ್ ಶಾಸಕರ ಈ ನಿರ್ಧಾರದಿಂದಾಗಿ, ಪ್ರಮುಖ ವಿಪಕ್ಷವಾಗಿ ನಿಯೋಜನೆಗೊಳ್ಳುವಂತೆ ಆಗಿದೆ.

ಗಮನಾರ್ಹ ಸಂಗತಿಯೆಂದರೆ, ಕಾಂಗ್ರೆಸ್​​​ ಬಲಹೀನಗೊಂಡಿರೋ ಬೆನ್ನಲ್ಲೇ ಹಲವು ನಾಯಕರು ತೃಣಮೂಲ ಕಾಂಗ್ರೆಸ್​​ ಅನ್ನು ಪರ್ಯಾಯವಾಗಿ ಪರಿಗಣಿಸುವಂತಾಗಿದೆ. ಇದೇ ಹಿನ್ನೆಲೆಯಲ್ಲಿ ಹಲವಾರು ಕಾಂಗ್ರೆಸ್, ಜೆಡಿಯು, ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್​​ನತ್ತ ಮುಖಮಾಡುವಂತೆ ಆಗಿದೆ.

ಹೀಗಾಗಿಯೇ ಇತ್ತೀಷೆಗಷ್ಟೇ ಕಾಂಗ್ರೆಸ್​ನ ನಾಯಕರಾದ ಕೀರ್ತಿ ಆಜಾದ್, ಅಶೋಕ್ ತನ್ವರ್, ಅದೇ ರೀತಿ ಜೆಡಿಯು ಮುಖಂಡ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಆಪ್ತರಾಗಿದ್ದ ಪವನ್ ವರ್ಮಾ ಟಿಎಂಸಿ ಸೇರಿದ್ದಾರೆ. ಇನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ನಾನು ಟಿಎಂಸಿ ಸೇರುವ ಅಗತ್ಯವಿಲ್ಲ.. ಯಾಕಂದ್ರೆ ನಾನು ಈಗಾಗಲೇ ದೀದಿ ಪರ ಇದ್ದೇನೆ ಎಂದು ಘೋಷಿಸಿದ್ದಾರೆ.  ಜೊತೆಗೆ ಗೋವಾದಲ್ಲೂ ಹಲವಾರು ಕಾಂಗ್ರೆಸ್ ನಾಯಕರು ಟಿಎಂಸಿ ಸೇರುತ್ತಿರೋದು ಗಮನಾರ್ಹವಾಗಿದೆ.

 

News First Live Kannada


Leave a Reply

Your email address will not be published. Required fields are marked *