ಚಿಕ್ಕಮಗಳೂರು: ಕಾಡಿನಲ್ಲಿ ತಾಯಿಯೊಂದಿಗೆ ಇರಬೇಕಿದ್ದ ಜಿಂಕೆಮರಿಯೊಂದು ನಾಡಿಗೆ ಬಂದು ಅಚ್ಚರಿ ಮೂಡಿಸಿದೆ. ಮೇಯಲು ಹೋದ ಜಾನುವಾರುಗಳು ಸಂಜೆ ಮನೆಗೆ ವಾಪಸ್ಸಾಗುವ ವೇಳೆ ರಾಸುಗಳ ಜೊತೆ ಜಿಂಕೆಮರಿ ಕೂಡ ಮನೆಯ ಕೊಟ್ಟಿಗೆಗೆ ಬಂದಿದೆ. ಮೂಡಿಗೆರೆ ತಾಲೂಕಿನ ಕಿರಗುಂದ ಸಮೀಪದ ಉದುಸೆ ಗ್ರಾಮದಲ್ಲಿ ಘಟನೆ ನಡೆದಿದೆ.

ಉದುಸೆ ಗ್ರಾಮದ ರಾಜೇಗೌಡರ ಮನೆಯಲ್ಲಿ ಹತ್ತಾರು ರಾಸುಗಳಿವೆ. ಆದರೆ ನಿನ್ನೆ ರಾಸುಗಳ ಜೊತೆ ಪುಟ್ಟ ಜಿಂಕೆಯೊಂದು ಕೂಡ ಬಂದಿದೆ. ಇದನ್ನ ಕಂಡ ಮನೆಯವರಿಗೆ ಕೆಲ ಕಾಲ ಆಶ್ಚರ್ಯ ಕೂಡ ಉಂಟಾಗಿದೆ. ಈ ಪುಟ್ಟ ಜಿಂಕೆಮರಿ ರಾಜೇಗೌಡರ ಮನೆಗೆ ಬಂದು ಮನೆಯವರ ಜೊತೆ ಆರಾಮಾಗಿದೆ. ಮನೆಯ ಮಕ್ಕಳ ಜೊತೆ ಮಕ್ಕಳಂತೆ ವರ್ತಿಸಿದೆ.

ಮನೆಯವರು ಕಾಡುಪ್ರಾಣಿಗಳನ್ನ ಸಾಕುವುದು ಕಾನೂನುಬಾಹಿರ ಎಂಬ ಕಾರಣದಿಂದ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ದಾರಿತಪ್ಪಿ ರಾಸುಗಳ ಜೊತೆ ಬಂದಿದ್ದ ಜಿಂಕೆಮರಿಯನ್ನು ಜೀಪಲ್ಲಿ ಹೊತ್ತೊಯ್ತು ಅರಣ್ಯಕ್ಕೆ ಬಿಟ್ಟಿದ್ದಾರೆ. ಮನೆಯವರು ಜಿಂಕೆ ಮರಿಯನ್ನ ಅಧಿಕಾರಿಗಳಿಗೆ ಒಪ್ಪಿಸುವ ಮುನ್ನ ಅದರ ಜೊತೆ ಫೋಟೋ ತೆಗಿಸಿಕೊಂಡು ಸಂತಸಪಟ್ಟಿದ್ದಾರೆ.

The post ಮೇಯಲು ಹೋಗಿದ್ದ ರಾಸುಳೊಂದಿಗೆ ಮನೆಗೆ ಬಂದ ಹೊಸ ಅತಿಥಿ; ಕುಟುಂಬಸ್ಥರಿಗೆ ಅಚ್ಚರಿ appeared first on News First Kannada.

Source: newsfirstlive.com

Source link