ಬೆಂಗಳೂರು: ಮೈಸೂರಿನ ಖಾಸಗಿ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್​​ ಅವರು, ಇಂದು ಸುದ್ದಿಗೋಷ್ಠಿ ನಡೆಸಿ ಘಟನೆ ಕುರಿತಂತೆ ಎದುರಾಗಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದ ಸದ್ಯ ಯುವ, ಹಿರಿಯ ನಟರು ಡಾ.ರಾಜ್​​ಕುಮಾರ್ ಅವರನ್ನು ನೋಡಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಈಗಾಗಲೇ ಪ್ರಕರಣದಲ್ಲಿ ಹಲವು ಸತ್ಯಾಂಶಗಳು ಹೊರಬಂದಿದೆ. ಹೋಟೆಲ್​ ಮಾಲೀಕರೇ ಈ ಬಗ್ಗೆ ಸತ್ಯವನ್ನು ಒಪ್ಪಿಕೊಂಡಿರುವ ಆಡಿಯೋವನ್ನು ಕೂಡ ಮಾಧ್ಯಮಗಳು ವರದಿ ಮಾಡಿದೆ. ಒಬ್ಬ ಮೇರು ನಟ ಹೇಗಿರಬೇಕು ಎಂಬುವುದನ್ನು ಡಾ.ರಾಜ್​ಕುಮಾರ್ ಅವರನ್ನು ನೋಡಿ ಕಲಿಯಬೇಕು. ನೀವು ಮಾದರಿಯಾಗಬೇಕಾದರೆ ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ ಎಂದರು.

ಇದನ್ನೂ ಓದಿ: ದರ್ಶನ್ ಹಲ್ಲೆ ಆರೋಪಕ್ಕೆ ಸ್ಫೋಟಕ ಟ್ವಿಸ್ಟ್; ಅನಾಮಧೇಯ-ಸಂದೇಶ್ ಮಾತಾಡಿರೋ ಆಡಿಯೋದಲ್ಲಿ ಏನಿದೆ..?

ಇದೇ ವೇಳೆ ಪ್ರಕರಣಕ್ಕೂ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ನಾನು ಒಂಟಿಯಾಗಿಯೇ ಹೋರಾಟ ಮಾಡುತ್ತಿದ್ದು, ಡ್ರಗ್​ ಪ್ರಕರಣದಲ್ಲೂ ಕೂಡ ನಾನು ಒಬ್ಬನೇ ಬಂದಿದ್ದೆ. ಆಗ ಕೇಳಿದ ಪ್ರಶ್ನೆಗಳನ್ನೇ ನೀವು ಕೇಳುತ್ತಿದ್ದೀರಿ. ಆದರೆ ನಾನು ಸಂದೇಶ್​​ ನಾಗರಾಜ್​ ಹಾಗೂ ಅವರ ಮಗನಿಗೆ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದು, ಪ್ರಕರಣವನ್ನು ಇನ್ನು ಮುಚ್ಚಿಟ್ಟು ಮುಂದುವರಿಸಲು ಹೋದರೆ ಸಮಾಜದೊಂದಿಗೆ ಇನ್ನು ದೊಡ್ಡ ದ್ವೇಷವನ್ನು ಕಟ್ಟಿಕೊಳ್ಳುತ್ತೀರಿ. ಇದನ್ನೇ ನಾನು ದರ್ಶನ್​ ಅವರಿಗೂ ಹೇಳುತ್ತೇನೆ ಎಂದರು.

ಇದನ್ನೂ ಓದಿ: ದರ್ಶನ್ ವಿರುದ್ಧ ಹಲ್ಲೆ ಆರೋಪ; ‘ಬಡವರೆಲ್ಲ ದಲಿತರು ಅಂತ ಹೇಳಿದ್ದೆ’ ಇಂದ್ರಜಿತ್ ‘U’ ಟರ್ನ್

The post ಮೇರುನಟ ಅಂದ್ರೆ ರಾಜ್​ಕುಮಾರ್.. ಇವರು​ ಅಣ್ಣಾವ್ರನ್ನ ನೋಡಿ ಕಲಿಬೇಕು -ಇಂದ್ರಜಿತ್ ಲಂಕೇಶ್ appeared first on News First Kannada.

Source: newsfirstlive.com

Source link