ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ | Watch video: Minister Ashwini Vaishnaw performs smartphone drop test at IMC 2022


ಸಧ್ಯ ಮೊಬೈಲ್ ಯುಗದಲ್ಲಿ 5-Gyಯಗದ ಬಗ್ಗೆ ಚರ್ಚೆಗಳು ಆಗುತ್ತಿವೆ. ಮತ್ತೊಂದೆಡೆ ಕೇಂದ್ರ ಸಚಿವರು ಮೊಬೈಲ್​ಅನ್ನು ಮೇಲಿಂದ ಬಿಸಾಲಕುವ ಮೂಲಕ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ

Minister Ashwini Vaishnaw performs smartphone drop test

ನವದೆಹಲಿ: ಭಾರತದಲ್ಲಿ ಇದೀಗ 5-G ಯುಗಾರಂಭವಾಗಿದೆ. ಮೊನ್ನೇ ಅಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದೀಗ ಅದು ಹೇಗೆ ವರ್ಕ್ ಆಗುತ್ತೆ? ಯಾವ ಫೋನ್​ಗಳಿಗೆ ಸಪೋರ್ಟ್​ ಮಾಡಿತ್ತೆ? ಅಂತೆಲ್ಲಾ ಮೊಬೈಲ್ ಬಳಕೆದಾರರಲ್ಲಿ ಚರ್ಚೆ ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ‘ಅಶ್ವಿನಿ ವೈಷ್ಣವ್ ಅವರು ವಿಶಿಷ್ಟ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಸ್ಮಾರ್ಟ್​ ಫೋನ್​ವೊಂದನ್ನು ನೆಲಕ್ಕೆ ಬೀಳಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಹೌದು…..ಒಂದು ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ರೆ, ಅದರ ಆಳ ಅಗಲದ ಬಗ್ಗೆ ಪರೀಕ್ಷಿಸುತ್ತಾರೆ. ಅದರಂತೆ ಕೇಂಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯ ಕಾರ್ಯಕ್ರದಮಲ್ಲಿ ಭಾಗವಹಿಸಿ ಮೊಬೈಲ್​ವೊಂದನ್ನು ಮೇಲಿಂದ ಕೆಳಕ್ಕೆ ಬಿಸಾಡಿ ಪರೀಕ್ಷೆ ಮಾಡಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಲಾದ ಈ ಹೊಸ ಹಾಗೂ ವಿಶಿಷ್ಟ ಹ್ಯಾಂಡ್‌ಸೆಟ್‌ನ್ನು ತಮ್ಮ ಎದೆ ಮಟ್ಟದ ಎತ್ತರಿಂದ ಕೆಳಕ್ಕೆ ಬೀಳಿಸಿ ಅದರ ಸಾಮರ್ಥ್ಯ ಹಾಗೂ ಅದರ ಗುಣಮಟ್ಟವನ್ನು ಟೆಸ್ಟ್ ಮಾಡಿದರು. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

TV9 Kannada


Leave a Reply

Your email address will not be published.