ನವದೆಹಲಿ: ಕೊರೊನಾ ಎರಡನೇ ಅಲೆ ಹೆಚ್ಚಾಗಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್​ ಹೈಕೋರ್ಟ್​​ ತರಾಟೆ ತೆಗೆದುಕೊಂಡ ಬೆನಲ್ಲೇ ಕೇಂದ್ರ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ. ಮೇ 2ರಂದು 5 ರಾಜ್ಯಗಳ ವಿಧಾನಸಭಾ ಹಾಗೂ ಇನ್ನಿತರೆ ಕ್ಷೇತ್ರಗಳ ಉಪಚುನಾವಣೆ  ಫಲಿತಾಂಶ ಹೊರಬೀಳಲಿದ್ದು, ಅಂದು ಸಂಭ್ರಮಾಚರಣೆ ಮಾಡದಂತೆ ಆಯೋಗ ಆದೇಶ ನೀಡಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಬಗ್ಗೆ ಅರಿವಿದ್ದರೂ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಚಾರ ನಡೆಸದಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಆಯೋಗ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲ ಎಂದು ಮದ್ರಾಸ್​​ ಹೈಕೋರ್ಟ್​​ ಚಾಟಿ ಬೀಸಿ , ಮುಂದೆ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಮತ ಎಣಿಕೆಗೆ ತಡೆ ನೀಡುವ ಎಚ್ಚರಿಕೆಯನ್ನೂ ನೀಡಿತ್ತು.

ಇದರ ಬೆನ್ನಲ್ಲೇ ಹೊಸ ಆದೇಶ ಹೊರಡಿಸಿರುವ ಆಯೋಗ, ಪಂಚರಾಜ್ಯಗಳ ಫಲಿತಾಂಶ ಮೇ 2ರಂದು ಹೊರಬರಲಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶದ ದಿನ ಹಾಗೂ ನಂತರದ ದಿನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡದಂತೆ ಸೂಚಿಸಿದೆ. ಅಲ್ಲದೇ ಗೆಲುವು ಸಾಧಿಸಿದ ಅಭ್ಯರ್ಥಿ ಪ್ರಮಾಣಪತ್ರ ಪಡೆಯುವ ವೇಳೆ ಅವರೊಂದಿಗೆ ಆಗಮಿಸಲು ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

The post ಮೇ 2ಕ್ಕೆ ಎಲೆಕ್ಷನ್ ರಿಲಸ್ಟ್​; ಗೆಲುವಿನ ಸಂಭ್ರಮಾಚರಣೆ ಮಾಡುವಂತಿಲ್ಲ -ಚುನಾವಣಾ ಆಯೋಗ ಆದೇಶ appeared first on News First Kannada.

Source: News First Kannada
Read More