ಮೇ 2-4 ರವರೆಗೆ ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್​​ಗೆ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ | Prime Minister Narendra Modi will visit Germany, Denmark, France from May 2 4


ಮೇ 2-4 ರವರೆಗೆ ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್​​ಗೆ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ

ನರೇಂದ್ರ ಮೋದಿ

ದೆಹಲಿ: ಈ ವರ್ಷದ ಮೊದಲ ವಿದೇಶ ಪ್ರವಾಸದಲ್ಲಿ ಉಕ್ರೇನ್‌ನಲ್ಲಿನ ಬಿಕ್ಕಟ್ಟು ಮತ್ತು ಅದನ್ನು ಎದುರಿಸಲು ಯುರೋಪ್‌ನ ದೃಢವಾದ ವಿಧಾನದ ನಡುವೆಯೇ  ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 2 ರಿಂದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಮೂರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.  ಭೇಟಿ ಬಗ್ಗೆ ಬುಧವಾರ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರಧಾನ ಮಂತ್ರಿ ಮೊದಲು ಜರ್ಮನಿಗೆ ಪ್ರಯಾಣಿಸುತ್ತಾರೆ, ನಂತರ ಡೆನ್ಮಾರ್ಕ್‌ಗೆ ಭೇಟಿ ನೀಡುತ್ತಾರೆ. ಮೇ 4 ರಂದು ಹಿಂದಿರುಗುವ ಪ್ರಯಾಣದಲ್ಲಿ ಪ್ಯಾರಿಸ್‌ಗೆ ಭೇಟಿ ನೀಡುತ್ತಾರೆ ಎಂದಿದೆ. ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಮರೀನ್ ಲೆ ಪೆನ್ ಅವರನ್ನು ಸೋಲಿಸಿದ ನಂತರ ಸೋಮವಾರ ಉನ್ನತ ಹುದ್ದೆಗೆ ಮರು ಆಯ್ಕೆಯಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪ್ಯಾರಿಸ್‌ನಲ್ಲಿ ಮೋದಿ ಮಾತುಕತೆ ನಡೆಸಲಿದ್ದಾರೆ. “ಬರ್ಲಿನ್‌ನಲ್ಲಿ ಪ್ರಧಾನ ಮಂತ್ರಿಗಳು ಜರ್ಮನಿಯ ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರು ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (IGC) ಆರನೇ ಆವೃತ್ತಿಯ ಅಧ್ಕ್ತೆ ವಹಿಸಲಿದ್ದಾರೆ” ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published. Required fields are marked *