ಧಾರವಾಡ: ರಾಜ್ಯದಲ್ಲಿ ಲಾಕ್​ಡೌನ್ ಜಾರಿ ವಿಚಾರವಾಗಿ ಧಾರವಾಡದಲ್ಲಿ ಹೇಳಿಕೆ ನೀಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್.. ಸದ್ಯ ಮೇ 4ರವರೆಗೆ ಕಠಿಣ ನಿಯಮ ಇರಲಿದೆ. ಮುಂದಿನ ವಾರವೂ ವೀಕೆಂಡ್ ಕರ್ಫ್ಯೂ ಇರುತ್ತೆ. ಉಳಿದ ದಿನದ ಕರ್ಫ್ಯೂ ಬಗ್ಗೆ ಚರ್ಚೆ ನಡೆದಿದೆ. ಲಾಕ್‌ಡೌನ್ ಬಗ್ಗೆಯೂ ಚರ್ಚೆ ನಡೀತಾ ಇದೆ ಎಂದಿದ್ದಾರೆ.

ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚೆ ಆಗಲಿದೆ. ನಾಳೆ ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ ಇದೆ. ಕ್ಯಾಬಿನೆಟ್‌ನಲ್ಲಿ ಸಿಎಂ ಮುಂದಿನ ನಿರ್ಧಾರ ತಗೋತಾರೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಮದುವೆಗೆ ಸಾವಿರಾರು ಜನ ಹೊರಡುತ್ತಿದ್ದಾರೆ. ಅದನ್ನು ನಿಯಂತ್ರಿಸಬೇಕಿದೆ ಎಂದಿದ್ದಾರೆ.

ಕಠಿಣ ನಿಯಮದಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ಹಿಂದೆಲ್ಲ 3-3 ತಿಂಗಳು ಲಾಕ್‌ಡೌನ್ ಇತ್ತು.. ಈಗ ಕೇವಲ 8-10 ದಿನದ ಲಾಕ್‌ಡೌನ್ ಅಷ್ಟೇ ಇದೆ. ಹಿಂದಿನ ವರ್ಷಕ್ಕಿಂತ ಈಗ ಕೊರೊನಾ ಜಾಸ್ತಿ ಇದೆ ಎಂದು ಹೇಳಿದ್ದಾರೆ.

The post ಮೇ 4ರವರೆಗೆ ಕಠಿಣ ನಿಯಮ ಇರಲಿದೆ.. ಲಾಕ್‌ಡೌನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ- ಜಗದೀಶ್ ಶೆಟ್ಟರ್ appeared first on News First Kannada.

Source: News First Kannada
Read More