ಮೈಕೆಲ್ ವಾನ್ 2009ರಲ್ಲಿ ಜನಾಂಗೀಯ ನಿಂದನೆ ಮಾಡಿದ್ದರೆಂದು ಆರೋಪಿಸಿದ ಪಾಕಿಸ್ತಾನದ ಮಾಜಿ ಆಟಗಾರರು | Former Pakistan player Rana Naveed alleges that he heard Michael Vaughan making racial comments in 2009


ಮೈಕೆಲ್ ವಾನ್ 2009ರಲ್ಲಿ ಜನಾಂಗೀಯ ನಿಂದನೆ ಮಾಡಿದ್ದರೆಂದು ಆರೋಪಿಸಿದ ಪಾಕಿಸ್ತಾನದ ಮಾಜಿ ಆಟಗಾರರು

ಮೈಕೆಲ್ ವಾನ್

ಮಾಧ್ಯಮಗಳಲ್ಲಿ, ಮೈಕ್ರೊ ಬ್ಲಾಗಿಂಗ್ ವೇದಿಕೆಗಳಲ್ಲಿ ಭಾರತೀಯ ಆಟಗಾರರನ್ನು ಟೀಕಿಸುವುದು ಹವ್ಯಾಸ ಮಾಡಿಕೊಂಡಿರುವ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಮೈಕೆಲ್ ವಾನ್ ಅವರ ನಿಜಬಣ್ಣವನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ರಾಣಾ ನವೀದ್-ಉಲ್-ಹಸನ್ ಬಯಲು ಮಾಡಿದ್ದಾರೆ. ಪಾಕಿಸ್ತಾನದ ಪರ 9 ಟೆಸ್ಟ್ ಮತ್ತು 74 ಒಡಿಗಳನ್ನು ಆಡಿದ ರಾಣಾ ಮತ್ತು ಪಾಕಿಸ್ತಾನದ ಮತ್ತೊಬ್ಬ ಆಟಗಾರ ಅಜೀಮ್ ರಫೀಕ್ ಇಂಗ್ಲಿಷ್ ಕೌಂಟಿ ಲೀಗ್​ನಲ್ಲಿ  ಯಾರ್ಕ್​ಶೈರ್ ಪರ ಆಡುತ್ತಿದ್ದರು. 2009 ರಲ್ಲಿ ವಾನ್ ಸಹ ಇದೇ ಕೌಂಟಿ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದರು. 2009 ರಲ್ಲಿ ಪಂದ್ಯವೊಂದು ಆರಂಭವಾಗುವ ಮೊದಲು, ರಾಣಾ ಮತ್ತು ರಫೀಕ್ ಜೊತೆಯಾಗಿ ನಿಂತಿದ್ದಾಗ ವಾನ್ ಅವರಿಬ್ಬರ ಕಡೆ ನೋಡಿ, ‘ಟೀಮಿನಲ್ಲಿ ನಿಮ್ಮ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಏನಾದರೂ ಮಾಡಲೇಬೇಕಾದ ಅಗತ್ಯವಿದೆ,’ ಎಂದು ಹೇಳಿದರೆಂದು ರಾಣಾ ಆರೋಪಿದ್ದಾರೆ. ಈ ಘಟನೆ ಟ್ರೆಂಟ್​ಬ್ರಿಜ್​​ ಮೈದಾನದಲ್ಲಿ ನಡೆದಿತ್ತು.

ಆ ಸಮಯದಲ್ಲಿ ರಾಣಾ ಮತ್ತು ರಫೀಕ್ ಅವರಲ್ಲದೆ ಏಷ್ಯನ್ ಮೂಲದ ಇನ್ನಿಬ್ಬರು ಅಟಗಾರರು ಯಾರ್ಕ್ಶೈರ್ ಕ್ಲಬ್ಗೆ ಆಡುತ್ತಿದ್ದರು. ರಾಣಾಗಿಂತ ಮೊದಲೇ ರಫೀಕ್ ಅವರು ವಾನ್ ರೇಸಿಸ್ಟ್ ಆಗಿದ್ದರು ಮತ್ತು 2009 ರಲ್ಲಿ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದರು. ರಫೀಕ್ ಮಾಡಿರುವ ಅರೋಪವನ್ನು ಈಗ ರಾಣಾ ಖಚಿತಪಡಿಸಿದ್ದಾರೆ.

ಕ್ರೀಡಾ ವೆಬ್ಸೈಟೊಂದರ ಜೊತೆ ಮಾತಾಡಿರುವ ರಾಣಾ ಅವರು ವಾನ್ ಜನಾಂಗೀಯ ನಿಂದನೆ ಮಾಡಿದ್ದು ನಿಜ ಅಂತ ಹೇಳಿರುವರಲ್ಲದೆ ಅದನ್ನು ಸಾಬೀತು ಮಾಡಲು ತಯಾರಿರುವುದಾಗಿ ಹೇಳಿದ್ದಾರೆ. ಏತನ್ಮಧ್ಯೆ, ಗುರುವಾರದಂದು ದಿ ಟೆಲಿಗ್ರಾಫ್ ಪತ್ರಿಕೆಗೆ ತಾವು ಬರೆಯುವ ಅಂಕಣದಲ್ಲಿ ವಾನ್, ರಫೀಕ್ ಮಾಡಿರುವ ಅರೋಪವನ್ನು ಸಾರಾಸಗಟು ತಳ್ಳಿಹಾಕಿದ್ದರು. ಆದರೆ, ವಾನ್ ಅವರ ಟೀಮ್ ಮೇಟ್ ಆಗಿದ್ದ ಗ್ಯಾರಿ ಬ್ಯಾಲೆನ್ಸ್, ಯಾರ್ಕ್ಶೈರ್ ಕ್ಲಬ್ ಮೂಲಕ ನೀಡಿರುವ ಹೇಳಿಕೆಯೊಂದರಲ್ಲಿ, ರಫೀಕ್ ಜೊತೆ ಸಂಭಾಷಣೆ ನಡೆಸುತ್ತಿದ್ದಾಗ ಜನಾಂಗೀಯ ನಿಂದನೆಯಾಗಿ ಉಪಯೋಗಿಸುವ ಪದವೊಂದನ್ನು ಪದೇಪದೆ ಬಳಸಿರುವುದು ಅಂಗೀಕರಿಸಿದ್ದಾರೆ.

ತಾನು ಮಾಡಿರುವ ಪ್ರಮಾದಕ್ಕೆ ವಾನ್ ಬೆಲೆ ತೆರುತ್ತಿದ್ದಾರೆ. ಬಿಬಿಸಿ ಟೆಸ್ಟ್ ಮ್ಯಾಚ್ ಸ್ಪೆಶಲ್ ಕಾರ್ಯಕ್ರಮದಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Yuvraj Singh: ಯುವಿ ಫ್ಯಾನ್ಸ್​​ಗೆ ಸಿಹಿ ಸುದ್ದಿ: ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡುವುದಾಗಿ ಘೋಷಿಸಿದ ಯುವರಾಜ್ ಸಿಂಗ್

TV9 Kannada


Leave a Reply

Your email address will not be published. Required fields are marked *