ನವದೆಹಲಿ: ಮೈಕ್ರೋಸಾಫ್ಟ್​ ಕೊ-ಫೌಂಡರ್ ಬಿಲ್​ ಗೇಟ್ಸ್​ ಅವರನ್ನ ಬಂಧಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಅದ್ರಲ್ಲೂ ಭಾರತದಲ್ಲಿ ಭಾರೀ ಒತ್ತಡ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಅರೆಸ್ಟ್ ಬಿಲ್​ಗೇಟ್ಸ್ ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್​ನಲ್ಲಿದೆ.

ಬಿಲ್​ ಗೇಟ್ಸ್ ಹಣ ಹೂಡಿಕೆ ಮಾಡಿರುವ ಎನ್​ಜಿಓ ಸಂಸ್ಥೆಯೊಂದಯ ಅನಧಿಕೃತ ವೈದ್ಯಕೀಯ ಪ್ರಯೋಗವನ್ನ ಭಾರತದಲ್ಲಿ ಆದಿವಾಸಿ ಮಕ್ಕಳ ಮೇಲೆ ನಡೆಸಿರುವ ಆರೋಪ ಕೇಳಿಬಂದಿದೆ. ಭಾರತದ ಗ್ರೇಟ್ ಗೇಮ್ ಇಂಡಿಯಾ ಹೆಸರಿನ ಜರ್ನಲ್​ ಒಂದು ಈ ಕುರಿತು ವರದಿ ಮಾಡಿದೆ. ಬಿಲ್​ ಗೇಟ್ಸ್ ಹಣ ಹೂಡಿಕೆ ಮಾಡಿರುವ ಸಿಯಾಟಲ್ ಮೂಲದ ಬಿಲ್ ಅಂಡ್ ಮೆಲಿಂದಾ ಗೇಸ್ಟ್ ಫೌಂಡೇಷನ್ (BMGF) ಹೆಸರಿನ ಖಾಸಗಿ ಸಂಘಟನೆ ಎರಡು ಬಗೆಯ ಹೆಚ್​ಪಿವಿ ವ್ಯಾಕ್ಸಿನ್​ಗಳನ್ನು 2009 ರಲ್ಲಿ ತೆಲಂಗಾಣದ ಖಮ್ಮನ್​ ಬಳಿ 14,000 ಆದಿವಾಸಿ ಹೆಣ್ಣುಮಕ್ಕಳ ಮೇಲೆ ಪ್ರಯೋಗಿಸಿದೆ ಎಂದು ವರದಿ ಹೇಳಿದೆ.

ಈ ರೀತಿ ಪ್ರಯೋಗ ನಡೆಸುವಾಗ ವ್ಯಾಕ್ಸಿನ್​ನಿಂದ ಆಗುವ ಪ್ರಯೋಗಗಳೇನು ಅಂತ ಹೇಳಲಾಗಿಲ್ಲ. ಅಲ್ಲದೇ ತಾವು ಪ್ರಾಯೋಗಿಕವಾಗಿ ನಡೆಸುತ್ತಿದ್ದೇವೆ ಅಂತಲೂ ಮಾಹಿತಿ ನೀಡದೇ ಈ ಪ್ರಯೋಗ ನಡೆಸಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಖಮ್ಮನ್ ಅತಿಬಡತನದಲ್ಲಿರುವ ಆದಿವಾಸಿ ಜನರನ್ನು ಹೊಂದಿರುವ ಪ್ರದೇಶವಾಗಿದ್ದು ಈ ಆದಿವಾಸಿ ಹೆಣ್ಣು ಮಕ್ಕಳ ಮೇಲೆ ಅವರ ಪೋಷಕರಿಗೆ ಮಾಹಿತಿ ನೀಡದೆ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 10-14 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣ 2011ರಲ್ಲಿ ಮೊದಲಿಗೆ ಬೆಳಕಿಗೆ ಬಂದಿದ್ದು ಪ್ರಾಯೋಗಿಕವಾಗಿ ಚುಚ್ಚುಮದ್ದು ಪಡೆದ 120ಕ್ಕೂ ಹೆಚ್ಚು ಮಕ್ಕಳಲ್ಲಿ ಅಡ್ಡಪರಿಣಾಮಗಳು ಕಂಡುಬಂದಿವೆಯಂತೆ.

The post ಮೈಕ್ರೋಸಾಫ್ಟ್​ನ ಬಿಲ್​ಗೇಟ್ಸ್​ ಮೇಲೆ ಗಂಭೀರ ಆರೋಪ: ಅರೆಸ್ಟ್ ಮಾಡುವಂತೆ ಒತ್ತಡ appeared first on News First Kannada.

Source: newsfirstlive.com

Source link