ಮೈಕ್ರೋಸಾಫ್ಟ್​ ಮಾಲೀಕ ಬಿಲ್​ ಗೇಟ್ಸ್​ರಿಗೆ ಮದುವೆ ಪ್ರಪೋಸಲ್​​; ಶ್ರೀಮಂತ ವ್ಯಕ್ತಿಯ ಜ್ಞಾನ, ಸೌಂದರ್ಯಕ್ಕೆ ಮಾರುಹೋದ ನಟಿ ! | Marriage Proposal to Bill Gates from on Twitter Kuwaiti Singer


ಮೈಕ್ರೋಸಾಫ್ಟ್​ ಮಾಲೀಕ ಬಿಲ್​ ಗೇಟ್ಸ್​ರಿಗೆ ಮದುವೆ ಪ್ರಪೋಸಲ್​​; ಶ್ರೀಮಂತ ವ್ಯಕ್ತಿಯ ಜ್ಞಾನ, ಸೌಂದರ್ಯಕ್ಕೆ ಮಾರುಹೋದ ನಟಿ !

ಬಿಲ್​ ಗೇಟ್ಸ್​

ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​​ (Bill Gates) ತಮ್ಮ ಪತ್ನಿ ಮೆಲಿಂದಾ ಗೇಟ್ಸ್​​ರಿಂದ ದೂರವಾಗಿದ್ದಾರೆ. ಇವರಿಬ್ಬರಿಗೂ ಈ ವರ್ಷದ ಪ್ರಾರಂಭದಲ್ಲೇ ಡಿವೋರ್ಸ್​ ಆಗಿದೆ. ಹೀಗೆ ಪತ್ನಿಯಿಂದ ದೂರವಾದ ಬಿಲ್​ ಗೇಟ್ಸ್​ರಿಗೆ ಈಗೊಂದು ಮದುವೆ ಪ್ರಪೋಸಲ್​ ಬಂದಿದೆ. ಕುವೈತ್​​ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್​ ಗೇಟ್ಸ್​​ರನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಅಸ್ಲಾಮಿಯವರಿಗೆ ಇನ್ನೂ 41ವರ್ಷ. ಅವರೀಗ 66ವರ್ಷದ, ಪತ್ನಿಯಿಂದ ದೂರವಾಗಿರುವ ಬಿಲ್​ ಗೇಟ್ಸ್​ರನ್ನು ವರಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಲ್​ಗೇಟ್ಸ್, ಜಗತ್ತಿಗೆ ಮುಂದಿನ ದಿನಗಳಲ್ಲಿ ಕಾಡಬಹುದಾದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದರು. ಅದನ್ನು ಪ್ರಕಟಿಸಿದ್ದ ಅಂತಾರಾಷ್ಟ್ರೀಯ ಮಾಧ್ಯಮದ ಸ್ಕ್ರೀನ್​ಶಾಟ್​ ಶೇರ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು, ಮುಂಬರುವ ದಿನಗಳಲ್ಲಿ ಸಿಡುಬಿನಂಥ ಸಾಂಕ್ರಾಮಿಕ ವೈರಸ್​​ಗಳ ಮೂಲಕ ಉಗ್ರರು ದಾಳಿ ನಡೆಸಬಹುದು. ಅಂಥ ದಾಳಿಗಳು ನಡೆದಾಗ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಹಣ  ಮೀಸಲಿಡಬೇಕು ಮತ್ತು ಮುಂದಿನ ಸಾಂಕ್ರಾಮಿಕಗಳಿಗೆ ನಾವು ಸಿದ್ಧ ಎಂಬ ಪುಸ್ತಕವನ್ನು ಇನ್ನು ಐದು ವರ್ಷಗಳಲ್ಲಿ ಹೊರತರಲಾಗುವುದು ಎಂದು ಬಿಲ್​ ಗೇಟ್ಸ್​ ಹೇಳಿದ್ದಾರೆ ಎಂದು ಟ್ವೀಟ್​ ಮಾಡಿದ್ದರು.

ಆ ಟ್ವೀಟ್​​ನ್ನು ರೀಟ್ವೀಟ್​ ಮಾಡಿಕೊಂಡಿರುವ ಗಾಯಕಿ ಶಾಮ್ಸ್​ ಅರೇಬಿಕ್​​ ಭಾಷೆಯಲ್ಲಿ ಟ್ವೀಟ್​ ಮಾಡಿದ್ದಾರೆ. ಈ ವ್ಯಕ್ತಿ (ಬಿಲ್​ ಗೇಟ್ಸ್​) ತುಂಬ ಸುಂದರವಾಗಿದ್ದಾರೆ. ಎಲೆಕ್ಟ್ರಾನಿಕ್​ ಯುಗದ ಪ್ರವಾದಿಯಾಗಿದ್ದಾರೆ.  ಮುಂದೇನಾಗಬಹುದು ಎಂದು ಅವರು ಭವಿಷ್ಯವಾಣಿ ಹೇಳುತ್ತಿರುವುದು ನನಗೆ ತುಂಬ ಇಷ್ಟವಾಯಿತು. ನಾನು ಅವರನ್ನು ಮದುವೆಯಾಗಲು ಸಿದ್ಧವಿದ್ದೇನೆ ಮತ್ತು ಈ ಮೂಲಕ ಅದನ್ನು ಹೇಳುತ್ತಿದ್ದೇನೆ. ನನ್ನ  ಪ್ರಪೋಸಲ್​​ನ್ನು ಅವರು ಒಪ್ಪಿಕೊಳ್ಳುವ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಹೇಳಿದ್ದಾರೆ.

ಶಾಮ್ಸ್​ ಟ್ವೀಟ್​ ಮಾಡುತ್ತಿದ್ದಂತೆ ಅದನ್ನು ಅರೇಬಿಕ್​ ಸ್ಥಳೀಯ ಮಾಧ್ಯಮಗಳು ಬ್ರೇಕಿಂಗ್​ ಸುದ್ದಿಯೆಂದು ಬಿಂಬಿಸಿವೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಿ, ವಿವಿಧ ಆಯಾಮಗಳಲ್ಲಿ ಸುದ್ದಿ ಮಾಡಿವೆ. ಅದರ ಹೊರತಾಗಿ ಸೋಷಿಯಲ್​ ಮೀಡಿಯಾಗಳಲ್ಲೂ ಕೂಡ ನಟಿಯ ಟ್ವೀಟ್​ ವಿಪರೀತ ವೈರಲ್​ ಆಗಿದೆ. ಕೆಲವರಂತೂ ಸಿಕ್ಕಾಪಟೆ ಅಪಹಾಸ್ಯ ಮಾಡಿದ್ದಾರೆ.

ಅಂದಹಾಗೆ ಈ ಟ್ವೀಟ್​​ನ್ನು ಶಾಮ್ಸ್​ ನವೆಂಬರ್ 6ರಂದು ಮಾಡಿದ್ದರು. ಅದಾದ ಬಳಿಕ ಟ್ವೀಟ್ ಸಿಕ್ಕಾಪಟೆ ವೈರಲ್​ ಆಗಿದೆ. ಅದನ್ನು ನೋಡಿ ಶಾಮ್ಸ್​ ತಮ್ಮ ಟ್ವೀಟ್​ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗೇ, ಕೆಲವರಿಗೆ ಇದೊಂದು ಜೋಕ್​ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳಿವಳಿಕೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಮಾಧ್ಯಮಗಳೂ ಇದನ್ನು ಸೀರಿಯಸ್​ ಆಗಿ ತೆಗೆದುಕೊಂಡಿದ್ದು ತೀರ ವಿಚಿತ್ರ ಎನ್ನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮನೆ, ಉದ್ಯೋಗ ಕೊಟ್ಟಿದ್ದ ಸಹಾಯಕ ಪ್ರಾಧ್ಯಾಪಕನ ಪತ್ನಿಯನ್ನೇ ಕೊಲೆ ಮಾಡಿದ ಕಾರು ಚಾಲಕ !

TV9 Kannada


Leave a Reply

Your email address will not be published. Required fields are marked *