ಮೈತುಂಬ ಅಪ್ಪು ಚಿತ್ರ, 300 ಕಿಮೀ ಸೈಕಲ್​ ಸವಾರಿ; ಪುನೀತ್​ ಸಮಾಧಿಗೆ ಅಪರೂಪದ ಅಭಿಮಾನಿ ಭೇಟಿ | Puneeth Rajkumar fan from Ranebennur rides cycle 300 km to visit Appu samadhi


ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಪ್ರತಿಯೊಬ್ಬ ಅಭಿಮಾನಿಯ (Puneeth Rajkumar Fans) ಪ್ರೀತಿಯೂ ಭಿನ್ನ. ರಾಣೇಬೆನ್ನೂರಿನ ಸಿದ್ದೇಶ ಎಂಬ ಅಭಿಮಾನಿಯನ್ನು ನೋಡಿದಾಗ ಆ ಮಾತು ಎಷ್ಟು ನಿಜ ಎಂಬುದು ತಿಳಿಯುತ್ತದೆ. ಅಪ್ಪು ಅವರನ್ನು ನೋಡಲು ಪ್ರತಿ ವರ್ಷ ಬೆಂಗಳೂರಿಗೆ ಬರುತ್ತಿದ್ದರು ಸಿದ್ದೇಶ್​. ಮೈ ಮೇಲೆ ಪುನೀತ್​ ಚಿತ್ರ ಬಿಡಿಸಿಕೊಂಡು, ಬರಿ ಮೈಯಲ್ಲಿ ಸೈಕಲ್​ ಸವಾರಿ ಮಾಡಿಕೊಂಡು ಬರುತ್ತಿದ್ದ ಸಿದ್ದೇಶ್​ ಅವರನ್ನು ಪುನೀತ್​ ಗುರುತಿಸಿ ಮಾತನಾಡಿಸುತ್ತಿದ್ದರು. ಈ ವರ್ಷ ಕೂಡ ಸಿದ್ದೇಶ್​ ಬಂದಿದ್ದಾರೆ. ಆದರೆ ಅವರನ್ನು ಮಾತನಾಡಿಸಲು ಅಪ್ಪು ಇಲ್ಲ. ಆ ನೋವಿನಲ್ಲೇ ಟಿವಿ9 ಕನ್ನಡದ ಜೊತೆಗೆ ಸಿದ್ದೇಶ್​ ಮಾತನಾಡಿದ್ದಾರೆ. ಪುನೀತ್​ ಬಗೆಗಿನ ತಮ್ಮ ಅಭಿಮಾನ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.

ರಾಣೇಬೆನ್ನೂರಿನಿಂದ ಮಳೆ, ಚಳಿಯನ್ನೂ ಲೆಕ್ಕಿಸದೇ 300 ಕಿ.ಮೀ ಸೈಕಲ್ ಸವಾರಿ ಮಾಡಿಕೊಂಡು ಬಂದಿರುವ ಸಿದ್ದೇಶ್​ ಅವರು ಪುನೀತ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ‘ಪುನೀತ್​ ಅವರನ್ನು ನಮ್ಮ ಮನೆಗೆ ಕರೆದು ಊಟ ಹಾಕಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದು ನೆರವೇರಲೇ ಇಲ್ಲ’ ಎಂದು ಸಿದ್ದೇಶ್​ ಹೇಳಿದ್ದಾರೆ.

ಇದನ್ನೂ ಓದಿ:

ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ​’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ

TV9 Kannada


Leave a Reply

Your email address will not be published. Required fields are marked *