ಮೈಸೂರು: ಈಗಿನ ಡಿಸಿಗೆ ನಾನು ಜಿಲ್ಲಾಧಿಕಾರಿ ಎನ್ನುವ ಅಹಂ ಇಲ್ಲ. ನಾನ್ಯಾಕೆ ಎಸ್ಪಿ, ಸಿಇಓ ಜೊತೆ ಹಳ್ಳಿಗೆ ಹೋಗ್ಬೇಕು ಅನ್ನೋ ಅಹಂಕಾರ ಇಲ್ಲ ಅಂತ ಸಚಿವ ಎಸ್​.ಟಿ.ಸೋಮಶೇಖರ್​ ಬಣ್ಣಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು.. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸತತ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್ ಕಡಿಮೆಯಾಗುತ್ತಿದೆ. ಇದು ಯಾರದ್ದೋ ಒಬ್ಬ ಅಧಿಕಾರಿಯಿಂದ ಕಡಿಮೆಯಾಗಿದ್ದಲ್ಲ. ಒಂದು ಕೆಲಸ ಮಾಡಿ ಹತ್ತು ಕೆಲಸ ಮಾಡಿದ್ದೀವಿ ಅಂತಾ
ಜಾಹಿರಾತು ಕೊಡುವ ಅಧಿಕಾರಿಗಳು ಇಲ್ಲ ಅಂತಾ ಪರೋಕ್ಷವಾಗಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.

The post ‘ಮೈಸೂರಲ್ಲಿ ಒಂದ್ ಕೆಲ್ಸ ಮಾಡಿ 10 ಕೆಲ್ಸ ಮಾಡಿದ್ದೀವಿ ಎಂದು ಜಾಹಿರಾತು ಕೊಡೋ ಅಧಿಕಾರಿಗಳಿಲ್ಲ’ appeared first on News First Kannada.

Source: newsfirstlive.com

Source link