ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿರುವ ಬಗ್ಗೆ ಮೈಸೂರು ಮೆಡಿಕಲ್ ಆಸ್ಪತ್ರೆ ಡೀನ್ ಡಾ. ನಂಜರಾಜ್ ಸ್ಪಷ್ಟನೆ ನೀಡಿದ್ದು.. ಇದು ಅತ್ಯಂತ ನಟೋರಿಯಸ್ ಕಿಲ್ಲರ್ ವೈರಸ್.. ನೇರವಾಗಿ ಹೃದಯಕ್ಕೆ ಅಟ್ಯಾಕ್ ಆಗಲಿದೆ ಎಂದಿದ್ದಾರೆ.

ನ್ಯೂಸ್​ ಫಸ್ಟ್​ ಜೊತೆಗೆ ಮಾತನಾಡಿದ ಡಾ. ನಂಜರಾಜ್.. ಐಸಿಯುಗೆ ದಾಖಲಾದ ಸೋಂಕಿತರು ಎಷ್ಟು ದಿನವಾದರೂ ಗುಣಮುಖರಾಗುತ್ತಿರಲಿಲ್ಲ. ಇತ್ತೀಚೆಗೆ ಒಬ್ಬ ವ್ಯಕ್ತಿಯಿಂದ‌ ಇಡೀ ಕುಟುಂಬಕ್ಕೆ ಸೋಂಕು ತಗಲುವುದು ಹೆಚ್ಚಾಗಿದೆ. ಡೆಲ್ಟಾ ವೈರಸ್ ಸಂಬಂಧ ಪ್ರತ್ಯೇಕ Mucor mycosis ವಾರ್ಡನ್ನ ತೆರೆಯಲಾಗಿದೆ. ಈವರೆಗೆ 77 ಮ್ಯೂಕರ್ ಮೈಕೋಸಿಸ್ ಕೇಸ್‌ಗಳು ಪತ್ತೆಯಾಗಿವೆ.

ಬ್ಲಡ್ ಗ್ಲೂಕೋಸ್ ಹೆಚ್ಚಾಗಿ ಹೃದಯಘಾತದಿಂದ‌ ಸಾವನ್ನಪ್ಪುತ್ತಿದ್ದಾರೆ. ಜನರು ಆದಷ್ಟೂ ಕೊರೊನಾ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು. ಎಲ್ಲರೂ ಕೋವಿಡ್ ಲಸಿಕೆ ಪಡೆಯುವುದು ಸೂಕ್ತ. ವ್ಯಾಕ್ಸಿನ್ ಪಡೆದ ವ್ಯಕ್ತಿಗಳು ಐಸಿಯುಗೆ ದಾಖಲಾಗುತ್ತಿರುವುದು ಕಡಿಮೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ; ಮೈಸೂರಲ್ಲಿ ಡೆಲ್ಟಾ ಪ್ಲಸ್​ ವೈರಸ್​ ಪತ್ತೆ

The post ಮೈಸೂರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ: ‘ಇದು ನಟೋರಿಯಸ್ ಕಿಲ್ಲರ್’ ಎಂದ ವೈದ್ಯರು appeared first on News First Kannada.

Source: newsfirstlive.com

Source link