ಮೈಸೂರಲ್ಲಿ: ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಮರ್ಯಾದೆ ಹತ್ಯೆಯೊಂದು ಬೆಚ್ಚಿ ಬೀಳಿಸಿದೆ. ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಪಾಪಿ ತಂದೆಯೊಬ್ಬ ಮಗಳನ್ನೇ ಬರ್ಬರವಾಗಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ.

ಗಾಯತ್ರಿ (18) ಕೊಲೆಯಾದ ಯುವತಿ. ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನ ಬೀದಿಯಲ್ಲಿ ಭಯಾನಕ ಕೃತ್ಯ ನಡೆದಿದೆ. ಅನ್ಯ ಜಾತಿಯ ಯುವಕನನ್ನ ಪ್ರೀತಿ ಮಾಡುತ್ತಿದ್ದಾಳೆ ಎಂದು ಆರೋಪಿಸಿರುವ ತಂದೆ ಜಯಣ್ಣ ಭೀಕರವಾಗಿ ಮಗಳನ್ನ ಹತ್ಯೆ ಮಾಡಿದ್ದಾನೆ.

ಇನ್ನು ಮಗಳನ್ನ ಕಗ್ಗೊಲೆ ಮಾಡಿದ ಜಯಣ್ಣ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

The post ಮೈಸೂರಲ್ಲಿ ಬೆಚ್ಚಿ ಬೀಳಿಸಿದ ಅವ’ಮರ್ಯಾದಾ’ ಹತ್ಯೆ; ತಂದೆಯಿಂದಲೇ ಮಗಳ ಕಗ್ಗೊಲೆ appeared first on News First Kannada.

Source: newsfirstlive.com

Source link