ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇನ್ನೂ ಸರಿಯಾಗಿ ನಿಯಂತ್ರಣಕ್ಕೆ ಬಂದಿಲ್ಲ. ಈ ಆತಂಕದ ಮಧ್ಯೆ ಮತ್ತೊಂದು ಆಘಾತಕಾರಿ ಸುದ್ದಿ ನಿನ್ನೆ ಹೊರಬಿದ್ದಿದ್ದು, ನಿನ್ನೆ ಒಂದೇ ದಿನ 52 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ!

ಇದುವರೆಗು ಮೈಸೂರು ಜಿಲ್ಲೆಯಲ್ಲಿ ಒಟ್ಟು 530 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. 530 ಮಕ್ಕಳಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ, ಮೃತರೆಲ್ಲಾ 7 ರಿಂದ 8 ವರ್ಷದೊಳಗಿನವರಾಗಿದ್ದಾರೆ. ಮೈಸೂರಿನಲ್ಲಿ ನಿನ್ನೆ ಒಂದೇ ದಿನ 52 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಜಿಲ್ಲಾಡಳಿತಕ್ಕೆ ಸವಾಲ್​​​ ಆಗಿ ಪರಿಣಮಿಸಿದೆ.

ಇನ್ನು ಮೈಸೂರಿನಲ್ಲಿ ನಿನ್ನೆ 546 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 22 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1,62,629 ಮಂದಿಯನ್ನ ಕೊರೊನಾ ಸೋಂಕು ಕಾಡಿದೆ.

The post ಮೈಸೂರಲ್ಲಿ ಭಯ ಹುಟ್ಟಿಸಿದ ಕೊರೊನಾ; ಒಂದೇ ದಿನ 52 ಮಕ್ಕಳಿಗೆ ಸೋಂಕು appeared first on News First Kannada.

Source: newsfirstlive.com

Source link