ಮೈಸೂರು: ನಿನ್ನೆ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿ ಕಣ್ಣೀರು ಹಾಕುತ್ತಾ ಪಾಲಿಕೆ ಆಯುಕ್ತ ಹುದ್ದೆ ಹಾಗೂ ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಶಿಲ್ಪಾ ನಾಗ್ ಇಂದು ಸುತ್ತೂರು ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸುತ್ತೂರು ಶ್ರೀಗಳನ್ನ ಆಯುಕ್ತೆ ಶಿಲ್ಪಾ ನಾಗ್ ಭೇಟಿಯಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಗ್, ಶಾಸಕರಾದ ಜಿಟಿ ದೇವೇಗೌಡ, ತನ್ವೀರ್ ಸೇಠ್ ಹಲವರು ಈ ವೇಳೆ ಮಠದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತ ಮೈಸೂರು ಪಾಲಿಕೆಯ ಸಿಬ್ಬಂದಿ, ಕಾರ್ಪೋರೇಟರ್​​ಗಳು, ಪೌರ ಕಾರ್ಮಿಕರು ಶಿಲ್ಪಾ ನಾಗ್ ಅವರನ್ನ ಬೆಂಬಲಿಸಿ.. ರೋಹಿಣಿ ಸಿಂಧೂರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

The post ಮೈಸೂರಲ್ಲಿ ರೋಹಿಣಿ ವಿರುದ್ಧ ಪ್ರತಿಭಟನೆ: ಸುತ್ತೂರು ಮಠದಲ್ಲಿ ಪ್ರತ್ಯಕ್ಷರಾದ ಶಿಲ್ಪಾ ನಾಗ್ appeared first on News First Kannada.

Source: newsfirstlive.com

Source link