ಮೈಸೂರಲ್ಲೂ ಬಸ್​ ಸಂಚಾರಕ್ಕೆ ಗ್ರೀನ್ ಸಿಗ್ನಲ್: ಶೇ. 30ರಷ್ಟು ಬಸ್​ಗಳ ಬಳಕೆ

ಮೈಸೂರಲ್ಲೂ ಬಸ್​ ಸಂಚಾರಕ್ಕೆ ಗ್ರೀನ್ ಸಿಗ್ನಲ್: ಶೇ. 30ರಷ್ಟು ಬಸ್​ಗಳ ಬಳಕೆ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕುಸಿತ ಕಂಡ ಬೆನ್ನಲ್ಲೇ ಹಲವು ಸಡಿಲಿಕೆಗಳನ್ನ ಮಾಡಲಾಗಿದೆ. ಇನ್ನು ಮುಂದಿನ ಸೋಮವಾರದಿಂದ ಬಸ್ ಸಂಚಾರವೂ ಆರಂಭವಾಗಲಿದೆ.

ಕೋವಿಡ್ ನಿಯಮಗಳನ್ನ ಪಾಲಿಸುವ ಮೂಲಕ ಬಸ್ ಸಂಚಾರ ಪ್ರಾರಂಭಿಸಲಿದ್ದು ಒಟ್ಟು 650 ಬಸ್​​ಗಳ ಪೈಕಿ ಶೇಕಡ 30 ರಷ್ಟು ಬಸ್​​ಗಳನ್ನ ಬಳಸಲು ಚಿಂತನೆ ನಡೆಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಡಿ.ಟಿ.ಓ ಹೇಮಂತ್ ಕುಮಾರ್.. ಬೆಂಗಳೂರು, ಮಡಿಕೇರಿ, ಚಾಮರಾಜನಗರ ಭಾಗಕ್ಕೆ ಮೊದಲ ಹಂತದಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಹೊರರಾಜ್ಯಗಳಿಗೆ ಸದ್ಯಕ್ಕೆ ಬಸ್ ಸಂಚಾರವಿಲ್ಲ. ಸರ್ಕಾರದ ನಿಯಮದ ಪ್ರಕಾರ ಶೇ.50%ನಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಕೋವಿಡ್ 2ನೇ ಡೋಸ್ ಪಡೆದ ನಿರ್ವಾಹಕರು, ಚಾಲಕರುಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕೋವಿಡ್ 3ನೇ ಅಲೆಗೆ ಸಂಬಂಧಿಸಿದಂತೆ ಮಕ್ಕಳ ನಿಯಂತ್ರಣಕ್ಕೆ ಯಾವುದೇ ಗೈಡ್ ಲೈನ್ಸ್ ದೊರೆತಿಲ್ಲ ಎಂದಿದ್ದಾರೆ.

The post ಮೈಸೂರಲ್ಲೂ ಬಸ್​ ಸಂಚಾರಕ್ಕೆ ಗ್ರೀನ್ ಸಿಗ್ನಲ್: ಶೇ. 30ರಷ್ಟು ಬಸ್​ಗಳ ಬಳಕೆ appeared first on News First Kannada.

Source: newsfirstlive.com

Source link