ಮೈಸೂರಿಗರಿಗೆ ಗುಡ್​ ನ್ಯೂಸ್; ಲಾಕ್​​ಡೌನ್​ನಿಂದ ಕೊಂಚ ರಿಲೀಫ್

ಮೈಸೂರಿಗರಿಗೆ ಗುಡ್​ ನ್ಯೂಸ್; ಲಾಕ್​​ಡೌನ್​ನಿಂದ ಕೊಂಚ ರಿಲೀಫ್

ಮೈಸೂರು: ಜಿಲ್ಲೆಯ ಡಿಸಿ ಡಾ.ಬಗಾದಿ ಗೌತಮ್ ಸುದ್ದಿಗೋಷ್ಟಿ ನಡೆಸಿ.. ಮೈಸೂರು ಜಿಲ್ಲೆಗೆ ಇಂದು ಶುಭ ಸುದ್ದಿ ಬಂದಿದೆ. ಮೈಸೂರು ಜಿಲ್ಲೆಯನ್ನ ಕ್ಯಾಟಗರಿ 3 ಜಿಲ್ಲೆಯಿಂದ 2 ಜಿಲ್ಲೆಗೆ ಏರಿಕೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ 5 to 10 % ಜಿಲ್ಲೆಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಕ್ಯಾಟಗರಿ 2ಗೆ ಅನ್ವಯ ನಿಯಮಗಳು ಮೈಸೂರು ಜಿಲ್ಲೆಯಲ್ಲಿ ಜಾರಿಯಾಗಲಿವೆ. 50% ಕಾರ್ಮಿಕರೊಂದಿಗೆ ಕಾರ್ಖಾನೆಗಳನ್ನ ಆರಂಭಿಸಬಹುದು. ಗಾರ್ಮೆಂಟ್ಸ್‌ಗಳಲ್ಲಿ ಶೇ 30 % ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಬಹುದು ಎಂದಿದ್ದಾರೆ.

ಅಲ್ಲದೇ ಈಗ ತಾನೇ ಮೈಸೂರಿನಲ್ಲಿ ಕೋವಿಡ್ ಸುಧಾರಣೆ ಆಗ್ತಿದೆ. ನಮ್ಮ ಜಿಲ್ಲೆಯಲ್ಲಿ ಒಂದು ಡೆಲ್ಟಾ ಪ್ಲಸ್, ಮೂರು ಡೆಲ್ಟಾ ಪ್ರಕರಣ ಪತ್ತೆಯಾಗಿವೆ. ಡೆಲ್ಟಾ ಪ್ಲಸ್ ಪ್ರಕರಣಗಳಿಗೆ ಕೋವಿಡ್ ಚಿಕಿತ್ಸೆಯೇ ಮುಂದುವರೆಯಲಿದೆ ಎಂದು ಇದೇ ವೇಳೆ ಬಗಾದಿ ಗೌತಮ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇನ್ಮುಂದೆ ಯಾವುದಕ್ಕೆಲ್ಲಾ ಅವಕಾಶ ಇರಲಿದೆ..?

 1. ಅಗತ್ಯ ವಸ್ತುಗಳ ಖರೀದಿಗೆ 6 ರಿಂದ ಮದ್ಯಾಹ್ನ 2 ರವರೆಗೆ ಅವಕಾಶವಿರಲಿದೆ.
 2. ಫೂಟ್‌ಪಾತ್ ವ್ಯಾಪಾರಿಗಳು ಮದ್ಯಾಹ್ನ 2 ರವರೆಗೆ ಓಪನ್ ಮಾಡಬಹುದು.
 3. ಮದ್ಯದಂಗಡಿಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ.
 4. ಎಲ್ಲಾ ವಸ್ತುಗಳ ಹೋಂ ಡೆಲಿವರಿಗೆ 24/7 ಅವಕಾಶ ಇರಲಿದೆ
 5. ನಿರ್ಮಾಣ ಕಾಮಗಾರಿ ವಸ್ತುಗಳ ಮಾರಾಟಕ್ಕೂ ಮಧ್ಯಾಹ್ನದ 2 ರವರೆಗೆ ಅವಕಾಶ
 6. ಬೆಳಗ್ಗೆ 5 ರಿಂದ 10 ರವರೆಗೆ ವಾಕಿಂಗ್ ಜಾಗಿಂಗ್‌ಗೆ ಅವಕಾಶ
 7. ಟ್ಯಾಕ್ಸಿ, ಆಟೋಗಳಲ್ಲಿ ಕೇವಲ ಇಬ್ಬರು ಪ್ರಯಾಣಿಕರೊಂದಿಗೆ ಸೇವೆಗೆ ಅವಕಾಶ
 8. ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಬಹುದು
 9. ಕೌಶಲ್ಯ ತರಬೇತಿಯನ್ನ ಕೋವಿಡ್ ನಿಯಮದೊಂದಿಗೆ ನಡೆಸಬಹುದು
 10. ಸಂಜೆ 7 ಘಂಟೆಯಿಂದ ಬೆಳಗ್ಗೆ 6 ರವೆರೆಗೆ ನೈಟ್ ಕರ್ಪ್ಯೂ ಜಾರಿ
 11. ವೀಕೆಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರೆಯಲಿದೆ
 12. ಮದುವೆ ಕಾರ್ಯಗಳಿಗೆ 40 ಮಂದಿಗೆ ಮಾತ್ರ ಅವಕಾಶ
 13. ತಹಶೀಲ್ದಾರರೇ ಪಾಸ್ ನೀಡಲಿದ್ದಾರೆ
 14. ಸಾರಿಗೆ ಬಸ್, ರೈಲ್ವೆ ಸಂಚಾರ ಬಗ್ಗೆ ಆಯಾ ಇಲಾಖೆಗಳು ಪ್ರಕಟಿಸಲಿವೆ
 15. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

The post ಮೈಸೂರಿಗರಿಗೆ ಗುಡ್​ ನ್ಯೂಸ್; ಲಾಕ್​​ಡೌನ್​ನಿಂದ ಕೊಂಚ ರಿಲೀಫ್ appeared first on News First Kannada.

Source: newsfirstlive.com

Source link