ಮೈಸೂರು: ಆಕ್ಸಿಜನ್ ಕೊರತೆ ನೀಗಿಸಲು ಮೈಸೂರಿನ ಯೆಶ್ ಟೆಲ್ ಸಮೂಹ ಸಂಸ್ಥೆ ಮುಂದಾಗಿದೆ.

ಕೊರೊನಾ ರೋಗಿಗಳಿಗೆ ತುರ್ತಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಆಕ್ಸಿಜನ್ ಮಟ್ಟ  ಕಡಿಮೆ ಆಗುತ್ತಿದ್ದಾಗ ಅವರಿಗೆ ಅವಶ್ಯಕವಾಗಿ ಬೇಕಾಗಿರುವ ಆಕ್ಸಿಜನ್ ಪೂರೈಸಲು ಉಚಿತ ಆಕ್ಸಿಜನ್ ಸೇವೆ ಆರಂಭಿಸಿದೆ.

ಆವಶ್ಯಕತೆ ಇದ್ದವರ ಮನೆ ಬಾಗಿಲಿಗೆ ಆಕ್ಸಿಜನ್ ಕಾಂನ್ಸನ್ಟ್ರೇಟರ್ ಅನ್ನು ಕಳಿಸಲಾಗುತ್ತದೆ. ವೀ ಕೇರ್ ಮೈಸೂರು ಸಂಸ್ಥೆ ಸಹಯೋಗದಲ್ಲಿ 20ಕ್ಕೂ ಹೆಚ್ಚು ಆಕ್ಸಿಜನ್ ಕಾಂನ್ಸನ್ಟ್ರೇಟರ್ ಗಳಿಂದ ಆಕ್ಸಿಜನ್ ಸೇವೆ ನೀಡಲಾಗುತ್ತಿದೆ.

ಯೆಶ್ ಟೆಲ್ ಸಮೂಹ ಸಂಸ್ಥೆಯ ಮಂಜುನಾಥ್‍ರಿಂದ ಆಕ್ಸಿಜನ್ ಕಾಂನ್ಸನ್ಟ್ರೇಟರ್ ಪೂರೈಕೆಯಾಗುತ್ತಿದೆ. ತುರ್ತು ಅಗತ್ಯ ಇರುವವರು ಆಕ್ಸಿಜನ್ ಕಾಂನ್ಸನ್ಟ್ರೇಟರ್ ಗಾಗಿ 96209 84019 ಅಥವಾ 98457 04515 ಮೊಬೈಲ್ ಸಂಖ್ಯೆಯನ್ನು  ಸಂಪರ್ಕಿಸಬಹುದು.

The post ಮೈಸೂರಿಗರೇ ತುರ್ತಾಗಿ ಆಕ್ಸಿಜನ್ ಬೇಕಾದರೆ ಯೆಶ್ ಟೆಲ್ ಸಂಪರ್ಕಿಸಿ appeared first on Public TV.

Source: publictv.in

Source link