ಮೈಸೂರಿಗೆ ಹೊರಟ ರವಿಕುಮಾರ್: ರೋಹಿಣಿ-ಶಿಲ್ಪಾನಾಗ್ ನಡುವೆ ನಡೆಯುತ್ತಾ ಸಂಧಾನ?

ಮೈಸೂರಿಗೆ ಹೊರಟ ರವಿಕುಮಾರ್: ರೋಹಿಣಿ-ಶಿಲ್ಪಾನಾಗ್ ನಡುವೆ ನಡೆಯುತ್ತಾ ಸಂಧಾನ?

ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​​.ಟಿ. ಸೋಮಶೇಖರ್ ತೆರಳಲಿದ್ದಾರೆ.

ಈ ವೇಳೆ ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಸಂಬಂಧ ಶಿಲ್ಪಾನಾಗ್​ ವಿವರಣೆ ನೀಡಲಿದ್ದಾರೆ ಎನ್ನಲಾಗಿದೆ. ಶಿಲ್ಪ ನಾಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವೆ ಸಂಧಾನದ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಎಸ್.ಟಿ.ಸೋಮಶೇಖರ್ ಈಗಾಗಲೇ ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕಾರ ಮಾಡಬೇಡಿ ಎಂದಿದ್ದಾರೆ. ಇನ್ನು ಮೈಸೂರು ಪಾಲಿಕೆ ಆಯುಕ್ತೆ ರಾಜೀನಾಮೆಯಿಂದಾಗಿ ಡಿಸಿ ಮೇಲೆ ಪಾಲಿಕೆ ಸದಸ್ಯರು, ಮೈಸೂರು ನಾಗರೀಕರು ಆಕ್ರೋಶ ಹೊರಹಾಕಿದ್ದಾರೆ.

The post ಮೈಸೂರಿಗೆ ಹೊರಟ ರವಿಕುಮಾರ್: ರೋಹಿಣಿ-ಶಿಲ್ಪಾನಾಗ್ ನಡುವೆ ನಡೆಯುತ್ತಾ ಸಂಧಾನ? appeared first on News First Kannada.

Source: newsfirstlive.com

Source link