ಮೈಸೂರಿನಲ್ಲಿ ಮನೆಗೆ ಬಂದ ನಾಗರಹಾವಿಗೆ ಹಾಲಿನ ನೈವೇದ್ಯ; ವಿಡಿಯೋ ಇದೆ | Snake come home and worship milk and Reptile Protector rescued snake


ಸಾಮಾನ್ಯವಾಗಿ ನಾಗರಹಾವನ್ನು ದೇವರೆಂದು ಪೂಜಿಸಲಾಗುತ್ತದೆ. ಹಾವಿನ ಮೂರ್ತಿಗೆ ಮತ್ತು ಹುತ್ತಕ್ಕೆ ಹಾಲನ್ನು ಸುರಿದು ಅಭಿಷೇಕ ಮಾಡುವುದು ಸಹಜ. ಆದರೆ ಮನೆಗೆ ಬಂದ ಹಾವಿಗೆ ಮನೆಯವರು ಹಾಲನ್ನು ಇಟ್ಟು ನೈವೇದ್ಯ ಮಾಡಿದ್ದಾರೆ. ಮೈಸೂರು ತಾಲೂಕು ಮರಟಿಕ್ಯಾತಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಎಂಬುವವರ ಮನೆಗೆ ನಾಗರಹಾವು ಬಂದಿತ್ತು. ಈ ವೇಳೆ ರಮೇಶ್ ಮನೆಯವರು ನಾಗರಹಾವಿಗೆ ಪೂಜೆ ಮಾಡಿ ಕುಡಿಯಲು ಹಾಲನ್ನು ಇಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸೂರ್ಯ ಕೀರ್ತಿ ನಾಗರಹಾವನ್ನು ರಕ್ಷಿಸಿದ್ದಾರೆ. ಹಾವು ಹಾಲು ಕುಡಿಯುವುದಿಲ್ಲ, ಹಾಲು ನೀಡಬೇಡಿ ಅಂತ ಮನೆಯವರಿಗೆ ಮಾಹಿತಿ ಸೂರ್ಯ ಕೀರ್ತಿ ನೀಡಿದ್ದಾರೆ. ನಂತರ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತದೆ.

TV9 Kannada


Leave a Reply

Your email address will not be published. Required fields are marked *