ಮೈಸೂರಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣ; ಸಾವಿಗೂ ಮುನ್ನ ಶಾಲಿನಿ ಮಾತಾಡಿರುವ ಆಡಿಯೋ ಬಹಿರಂಗ | Mysuru Honor Killing case audio reveals that the young woman had spoken to the young man


ಮೈಸೂರಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣ; ಸಾವಿಗೂ ಮುನ್ನ ಶಾಲಿನಿ ಮಾತಾಡಿರುವ ಆಡಿಯೋ ಬಹಿರಂಗ

ಕೊಲೆಯಾದ ಯುವತಿ ಶಾಲಿನಿ

ಬಹಿರಂಗವಾದ ಆಡಿಯೋದಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಫೋನ್​ನಲ್ಲಿ ಮಾತನಾಡಿದ್ದ ಶಾಲಿನಿ, ನಾನು ಸತ್ತರೆ ಅದಕ್ಕೆ ನಮ್ಮ ಅಪ್ಪ-ಅಮ್ಮನೇ ಕಾರಣ ಎಂದಿದ್ದಾಳೆ.

TV9kannada Web Team

| Edited By: sandhya thejappa

Jun 09, 2022 | 8:35 AM
ಮೈಸೂರು: ಜಿಲ್ಲೆಯಲ್ಲಿ ನಡೆದ ಮರ್ಯಾದೆ ಹತ್ಯೆ (Honor Killing) ಪ್ರಕರಣಕ್ಕೆ ಸಂಬಂಧಿಸಿ ಮೃತ ಯುವತಿ ಶಾಲಿನಿ ಸಾವಿಗೂ ಮುನ್ನಾ ಮಾತಾಡಿರುವ ಆಡಿಯೋ (Audio) ಬಹಿರಂಗವಾಗಿದೆ. ಬಹಿರಂಗವಾದ ಆಡಿಯೋದಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಫೋನ್​ನಲ್ಲಿ ಮಾತನಾಡಿದ್ದ ಶಾಲಿನಿ, ‘ನಾನು ಸತ್ತರೆ ಅದಕ್ಕೆ ನಮ್ಮ ಅಪ್ಪ-ಅಮ್ಮನೇ ಕಾರಣ’. ‘ನನ್ನನ್ನು ಅಪಹರಣ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ’ ಎಂದು ಯುವಕನಿಗೆ ತಿಳಿಸಿದ್ದಾಳೆ. ನನ್ನನ್ನು ತಂದೆ, ತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಾಲ ಮಂದಿರದಲ್ಲಿ ನಿನ್ನ ಇಷ್ಟದಂತೆ ಇರುವಂತೆ ಹೇಳಿದ್ದಾರೆ. ನನ್ನನ್ನು ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದ್ದ ಯುವತಿ ನಾನು ಮಾತಾಡುವುದನ್ನು ರೆಕಾರ್ಡ್ ಮಾಡುವಂತೆ ಯುವಕನಿಗೆ ಹೇಳಿದ್ದಾಳೆ.

TV9 Kannada


Leave a Reply

Your email address will not be published.