ಮೈಸೂರು: ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಟೆಸ್ಟಿಂಗ್ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ನೆನ್ನೆ ಒಂದೇ ದಿನ 40 ಸಾವಿರ ವ್ಯಾಕ್ಸಿನ್ ನೀಡಲಾಗಿದೆ. ಜುಲೈ 5 ರೊಳಗೆ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದೆ. ಅತೀ ಹೆಚ್ಚು ಟೆಸ್ಟಿಂಗ್ ನೆಡೆಯುತ್ತಿರೋದ್ರಿಂದ ಪಾಸಿಟಿವಿಟಿ ರೇಟ್ ಶೇ.9ರಷ್ಟಿದೆ. ಲಾಕ್ಡೌನ್ ಮುಂದುವರಿಕೆಯಿಂದ ಸೋಂಕು ನಿಯಂತ್ರಣಕ್ಕೆ ಬರ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

ಜೊತೆಗೆ ಜನ ಸಹಕಾರ ನೀಡ್ತಿರೋದ್ರಿಂದ ಅನ್ಲಾಕ್‌ ಮಾಡುವ ವಾತಾವರಣ ನಿರ್ಮಾಣವಾಗ್ತಿದೆ. ಕೊರೊನಾ 3ನೇ ಅಲೆ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಜಿಲ್ಲಾಡಳಿತವೂ ಸಿದ್ಧತೆ ಮಾಡಿಕೊಂಡಿದೆ‌. ಪ್ರತಿದಿನ 9,800 ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಎಲ್ಲಾ ತಾಲೂಕು ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನ ನೀಡಲಾಗಿದೆ‌. ನಾಳೆಯಿಂದ ಮತ್ತಷ್ಟು ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸಲಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ‌ ಎಂದಿದ್ದಾರೆ.

ಇನ್ನು ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ ವಿಚಾರವಾಗಿ ನಮ್ಮ ಜಿಲ್ಲೆಯಿಂದ 40 ಸ್ಯಾಂಪಲ್ ಕಳುಹಿಸಿದ್ದೇವೆ. ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸ್ಯಾಂಪಲ್ಸ್ ಮಾತ್ರ ಕಳುಹಿಸಲಾಗಿದೆ, ರಿಸಲ್ಟ್ ಬಂದಿಲ್ಲ ಎಂದಿದ್ದಾರೆ. ಒಂದೆಡೆ ನೋಡಲ್ ಅಧಿಕಾರಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿರುವುದಾಗಿ ಹೇಳಿರುವುದರಿಂದ ಗೊಂದ ಮೂಡಿದಂತಾಗಿದೆ.

The post ಮೈಸೂರಿನಲ್ಲಿ ಯಾವಾಗ ಕಡಿಮೆಯಾಗುತ್ತೆ ಪಾಸಿಟಿವಿಟಿ ರೇಟ್..? ಡಿಸಿ ಹೇಳಿದ್ದೇನು..? appeared first on News First Kannada.

Source: newsfirstlive.com

Source link