ಮೈಸೂರಿನಲ್ಲಿ ಲಸಿಕೆ ನೀಡಲು ವಿನೂತನ ಪ್ರಯತ್ನಗಳು, ತಮಟೆ ಬಾರಿಸಿ ಲಸಿಕೆ ಪಡೆಯುವಂತೆ ಮನವಿ | Announcement with tamate to get coronavaccine in mysore


ಮೈಸೂರಿನಲ್ಲಿ ಲಸಿಕೆ ನೀಡಲು ವಿನೂತನ ಪ್ರಯತ್ನಗಳು, ತಮಟೆ ಬಾರಿಸಿ ಲಸಿಕೆ ಪಡೆಯುವಂತೆ ಮನವಿ

ತಮಟೆ ಬಾರಿಸಿ ಲಸಿಕೆ ಪಡೆಯುವಂತೆ ಮನವಿ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಲಸಿಕೆ ನೀಡಲು ವಿನೂತನ ಪ್ರಯತ್ನಗಳು ಮುಂದುವರೆದಿವೆ. ಲಸಿಕೆ ಪಡೆಯುವಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗಿದೆ. ತಮಟೆ ಬಾರಿಸುವ ಮೂಲಕ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲಾಗಿದೆ.

ಮೈಸೂರು ತಾಲೂಕಿನ ಭುಗತಗಳ್ಳಿಯಲ್ಲಿ ತಮಟೆ ಬಾರಿಸಿ ಗ್ರಾಮದಲ್ಲಿ ಇಂದು ಲಸಿಕೆ ನೀಡುವುದಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ. ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ.

ಮನೆಗೆ ಬಂದ ನಾಗರ ಹಾವಿಗೆ ಹಾಲೆರೆದ ಕುಟುಂಬ
ಮೈಸೂರಿನ ಮರಟಿಕ್ಯಾತಹಳ್ಳಿಯಲ್ಲಿ ಅಪರೂಪದ ಘಟನೆ ನಡೆದಿದೆ. ರಮೇಶ್ ಎಂಬುವವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಮನೆಯವರು ನಾಗರಹಾವಿಗೆ ಪೂಜೆ ಮಾಡಿ ಬಟ್ಟಲಿನಲ್ಲಿ ಹಾಲು ಇಟ್ಟಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸೂರ್ಯ ಕೀರ್ತಿ ನಾಗರಹಾವು ಸಂರಕ್ಷಣೆ ಮಾಡಿದ್ದಾರೆ. ನಾಗರಹಾವು ಹಾಲು ಕುಡಿಯುವುದಿಲ್ಲ ಹಾಲು ನೀಡಬೇಡಿ ಎಂದು ಮನೆಯವರಿಗೆ ಮಾಹಿತಿ ನೀಡಿ. ಹಾವನ್ನು ಸಂರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಗ್ರಾಮದ ರೈತರಾದ ಸಿದ್ದರಾಜು ಹಾಗೂ ದೇವರಾಜು ಜಮೀನಿನಲ್ಲಿ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ‌ ನಿರಂತರ ದಾಳಿ ನಡೆಸಿ ಕುರಿ, ಕೋಳಿ, ನಾಯಿ‌, ಮೇಕೆ ಕೊಂದು ಹಾಕಿದ್ದ ಚಿರತೆ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡಿರುತ್ತಿದ್ದ ಬಗ್ಗೆ ಅಧಿಕಾತಿಗಳಿಗೆ ಮಾಹಿತಿ ಸಿಕ್ಕಿತ್ತು. ಸದ್ಯ ಅರಣ್ಯ ಇಲಾಖೆ ಇಟ್ಟ ಬೋನಿಗೆ ಚಿರತೆ ಬಿದ್ದಿದೆ.

ಚಿರತೆ ನೋಡಲು ಜನರು ಮುಗಿಬಿದ್ದಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ‌ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಮತ್ತಷ್ಟು ಚಿರತೆಗಳಿವೆ ಅವುಗಳನ್ನು ಸೆರೆ ಹಿಡಿಯಿರಿ ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಸ್ಪೈಡರ್​ ಮ್ಯಾನ್​​ ಲೀಕ್​: ಒಂದೇ ಫೋಟೋದಲ್ಲಿ ಅಭಿಮಾನಿಗಳಿಗೆ ನಿರಾಸೆ ಮತ್ತು ನಿರೀಕ್ಷೆ

TV9 Kannada


Leave a Reply

Your email address will not be published. Required fields are marked *