
ಕುಡಿದು ಗಲಾಟೆ ಮಾಡುವ ದೃಶ್ಯ ಸೆರೆಯಾಗಿದೆ
ಬಾರ್ ಬಳಿ ಹೆಡ್ ಕಾನ್ಸ್ಟೇಬಲ್ ಹರೀಶ್ ಮನೆಯಿದೆ. ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ಎಂದು ಹರೀಶ್ ಹೇಳಿದ್ದಾರೆ. ಹೀಗಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರತಿದಿನ ಕುಡಿದು ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಮೈಸೂರು: ಹೊರವಲಯದಲ್ಲಿ ಹೆಡ್ ಕಾನ್ಸ್ಟೇಬಲ್ (Head Constable) ಮೇಲೆ ಹಲ್ಲೆ ನಡೆದಿದ್ದು, ಅನುಗ್ರಹ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿದೆ. ಮನೆ ಮುಂದೆ ವಾಹನ (Vehicles) ನಿಲ್ಲಿಸಬೇಡಿ ಎಂದಿದ್ದಕ್ಕೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹರೀಶ್ ಎಂಬುವವರು ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿ, ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಪುನೀತ್, ವಿನಯ್, ಶ್ರೀಕಾಂತ್ ಸೇರಿದಂತೆ 6 ಜನರ ವಿರುದ್ಧ ಇಲವಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾರ್ ಬಳಿ ಹೆಡ್ ಕಾನ್ಸ್ಟೇಬಲ್ ಹರೀಶ್ ಮನೆಯಿದೆ. ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ಎಂದು ಹರೀಶ್ ಹೇಳಿದ್ದಾರೆ. ಹೀಗಾಗಿ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರತಿದಿನ ಕುಡಿದು ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ಈ ರಸ್ತೆಯಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಬಾರ್ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.