ಮೈಸೂರು: ಇಂದಿನಿಂದ ಎರಡು ಆಕ್ಸಿಜನ್ ಬಸ್​​​ಗಳು ಮೈಸೂರಿನಲ್ಲಿ ಸಂಚಾರ ಆರಂಭಿಸಿವೆ. ಜಿಲ್ಲಾ ಅಗರ್​​ವಾಲ್ ಸಮಾಜದಿಂದ ಎರಡು ಬಸ್​​​ಗಳ‌ನ್ನ ಕೊಡುಗೆಯಾಗಿ ನೀಡಲಾಗಿದೆ.

ಗ್ರೀನ್ ವುಡ್ಸ್ ಇಂಟರ್​ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ ಜಿಲ್ಲಾಡಳಿತಕ್ಕೆ ಮೊದಲ ಹಂತದಲ್ಲಿ ಎರಡು ಮಿನಿ ಬಸ್​ಗಳನ್ನ ಹಸ್ತಾಂತರ ಮಾಡಲಾಗಿದೆ. ಈ ಬಸ್​​ಗಳಲ್ಲಿ ಏಕಕಾಲದಲ್ಲಿ 14 ಜನರಿಗೆ ಆಕ್ಸಿಜನ್ ನೀಡುವ ವ್ಯವಸ್ಥೆ ಇದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳ ಮುಂಭಾಗ ಈ ಬಸ್​​ಗಳು ಕಾರ್ಯನಿರ್ವಹಿಸಲಿವೆ.

ಸಂಸದ ಪ್ರತಾಪ್ ಸಿಂಹ ಇಂದು ಆಕ್ಸಿಜನ್ ಬಸ್​ಗಳ ಲೋಕಾರ್ಪಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, JLB ಅಧ್ಯಕ್ಷ ಅಪ್ಪಣ್ಣ, ಮೇಯರ್ ರುಕ್ಮಿಣಿ ಮಾದೇಗೌಡ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉಪಸ್ಥಿತರಿದ್ದರು.

The post ಮೈಸೂರಿನಲ್ಲೂ ಇಂದಿನಿಂದ ಆಕ್ಸಿಜನ್ ಬಸ್​ಗಳ​​​ ಸಂಚಾರ ಆರಂಭ appeared first on News First Kannada.

Source: newsfirstlive.com

Source link