ಮೈಸೂರಿನ ಅರಸು ರಸ್ತೆಯಲ್ಲಿ ಅಸುರನಂಥ ಕಾರು ಚಾಲಕನ ಪ್ರಮಾದ, ಅದೃಷ್ಟವಶಾತ್ ಮಹಿಳೆಯರು ಬಚಾವಾದರು!


Lucky women of Mysuru

ಮೈಸೂರು ನಗರದ ಅರಸು ರಸ್ತೆಯಲ್ಲಿ ಕಾರು ಓಡಿಸಲು ಗೊತ್ತಿಲ್ಲದವನು ಮಾಡಿರುವ ಅನಾಹುತವೊಂದು ಅಲ್ಲಿನ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ದೃಶ್ಯದಲ್ಲಿ ಕಾಣುತ್ತಿರುವ ಮಹಿಳೆಯರಿಗೆ ಗಂಭೀರ ಸ್ವರೂಪದ ಗಾಯಗಳೇನೂ ಅಗಿಲ್ಲ. ಅಸಲಿಗೆ ಅವರ ಬುದ್ಧಿವಂತಿಕೆಯಿಂದ ಅಪಘಾತ ತಪ್ಪಿದೆ ಎಂದು ಹೇಳಬಹುದು. ಕಾರು ತಮ್ಮತ್ತ ನುಗ್ಗುತ್ತಿರುವುದು ಕಾಣುತ್ತಿದ್ದಂತೆಯೇ ಅವರಿಬ್ಬರೂ ಪಕ್ಕಕ್ಕೆ ಸರಿದು ಬಿಡುತ್ತಾರೆ. ಆದರೂ ಬಿಳಿಬಣ್ಣದ ಸೀರೆ ಉಟ್ಟಿರುವ ಮಹಿಳೆಯ ಕಾಲಿಗೆ ಗಾಯವಾದಂತಿದೆ. ನೆಲಕ್ಕೆ ಬಿದ್ದು ಏಳುವಾಗ ಅವರು ತಮ್ಮ ಎಡಗಾಲನ್ನು ಮುಟ್ಟಿನೋಡಿಕೊಳ್ಳುತ್ತಾರೆ. ಆದರೆ, ಆ ಪಕ್ಕ ಇರುವ ಹಳದಿ ಬಣ್ಣದ ಸೀರೆಯಲ್ಲಿರುವ ಮಹಿಳೆಗೆ ಏನೂ ಆಗಿಲ್ಲ. ಅವರು ಕೆಳಗಡೆಯೂ ಬೀಳಲಿಲ್ಲ.

ಕಾರಿನ ಚಾಲಕ ಅದನ್ನು ಪಾರ್ಕ್ ಮಾಡುವಾಗ ನಿಯಂತ್ರಣ ಕಳೆದುಕೊಂಡಿದ್ದಾನೆ. ಅಸಲಿಗೆ ಅವನಿಗೆ ಕಾರು ಡ್ರೈವ್ ಮಾಡುವುದು ಗೊತ್ತಿದೆಯೋ ಇಲ್ಲವೋ ಅನ್ನೋದು ಗೊತ್ತಾಗುತ್ತಿಲ್ಲ. ಒಂದು ಪಕ್ಷ ಗೊತ್ತಿಲ್ಲದಿದ್ದರೆ, ಈ ಸ್ಥಳದವರೆಗೆ ಅದನ್ನು ಹೇಗೆ ತಂದ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಹಾಗೊಂದು ವೇಳೆ ಅವನಿಗೆ ಡ್ರೈವಿಂಗ್ ಗೊತ್ತಿದ್ದು, ಲೈಸೆನ್ಸ್ ಕೂಡ ಹೊಂದಿದ್ದರೆ, ಕೇವಲ ಒಂದಡಿಯಷ್ಟು ದೂರ ಕಾರನ್ನು ಮುಂದಕ್ಕೆ ತೆಗೆದುಕೊಳ್ಳುವಾಗ ಅವನು ಏಕಾಏಕಿ ನಿಯಂತ್ರಣ ಕಳೆದುಕೊಂಡು ಬಿಡುತ್ತಾನೆಯೇ? ಮಿಲಿಯನ್ ಡಾಲರ್ ಪ್ರಶ್ನೆ!

ಅನಾಹುತ ಸಂಭವಿಸಿದ ಕೂಡಲೇ ಸುತ್ತಮುತ್ತ ಇದ್ದ ಜನ ಓಡಿಬರುವುದು ಸಿಸಿಟಿವಿ ಫುಟೇಜ್ ನಲ್ಲಿ ಕಾಣುತ್ತಿದೆ. ಆದರೆ, ಕಾರಿನ ಚಾಲಕ ಮಾತ್ರ ಕಾರಿನಿಂದ ಹೊರಬರುತ್ತಿಲ್ಲ. ಬಂದರೆ ಒದೆ ಬೀಳೋದು ಪಕ್ಕಾ ಅನ್ನುವುದು ಅವನಿಗೆ ಖಾತ್ರಿಯಾಗಿದೆ.

ಆದರೆ ಅವನ ಎಡಪಕ್ಕದ ಡೋರನ್ನು ಯಾರೋ ತೆರೆದು ಅವನನ್ನು ಹೊರಗೆಳೆಯುವ ಪ್ರಯತ್ನ ಮಾಡುತ್ತಾರೆ. ಫುಟೇಜ್ ಅಲ್ಲಿಗೆ ಮುಗಿದು ಹೋಗುತ್ತದೆ. ಜನ ಅವನನ್ನು ಹೊರಗೆಳೆದು ತದುಕಿರಲಿಕ್ಕೂ ಸಾಕು.

ಇದನ್ನೂ ಓದಿ:    ‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *