ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ.

ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜ್ ತೆರವು
ಮೈಸೂರು: ಕೆಲವು ದಿನಗಳ ಹಿಂದೆ ವಿವಾದ ಸೃಷ್ಟಿಸಿದ್ದ ಮೈಸೂರಿನ ಬಸ್ ಶೆಲ್ಟರ್ ಮೇಲಿದ್ದ ಗುಂಬಜನ್ನು ತೆರವುಗೊಳಿಸಲಾಗಿದೆ. ಬಸ್ ಶೆಲ್ಟರ್ ಮೇಲಿದ್ದ ಮೂರು ಗುಂಬಜ್ಗಳ ಪೈಕಿ 2 ಗುಂಬಜ್ ತೆರವು ಮಾಡಲಾಗಿದೆ ಎಂದು ಶಾಸಕ ರಾಮದಾಸ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ವಿವಾದದ ಕೇಂದ್ರವಾಗಬಾರದು ಎಂಬ ಕಾರಣಕ್ಕೆ ಗುಂಬಜ್ ತೆರವು ಮಾಡಲಾಗಿದೆ. ಇದೇ ಮಾದರಿಯಲ್ಲಿ 12 ಬಸ್ ಶೆಲ್ಟರ್ ನಿರ್ಮಾಣ ಮಾಡಲಾಗುತ್ತೆ. ಅರಮನೆ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸುವ ಉದ್ದೇಶ ಇತ್ತು. ಇದಕ್ಕೆ ಅನವಶ್ಯಕವಾಗಿ ಧರ್ಮದ ಲೇಪನ ಮಾಡಿದ್ದು ನೋವಾಗಿದೆ. ಹಿರಿಯರ ಸಲಹೆ ಮೇರೆಗೆ, ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಮಾಧ್ಯಮ ಪ್ರಕಟಣೆ ಮೂಲಕ ಶಾಸಕ ರಾಮದಾಸ್ ಜನತೆಗೆ ಮನವಿ ಮಾಡಿದ್ದಾರೆ.