ಮೈಸೂರು: ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್​; ಇಂದು ‘ನಾಲ್ವಡಿ ನಾಲ್ನುಡಿ’ ಕಾರ್ಯಕ್ರಮ ನಡೆಸಿಕೊಡಲಿರುವ ಹಂಸಲೇಖ | Music director Hamsalekha will perform Nalvadi Nalnudi program in Mysore dasara Sangeetha Darbar 2021

ಮೈಸೂರು: ಅರಮನೆ ವೇದಿಕೆಯಲ್ಲಿ ಸಂಗೀತ ದರ್ಬಾರ್​; ಇಂದು ‘ನಾಲ್ವಡಿ ನಾಲ್ನುಡಿ’ ಕಾರ್ಯಕ್ರಮ ನಡೆಸಿಕೊಡಲಿರುವ ಹಂಸಲೇಖ

ಸಾಂಕೇತಿಕ ಚಿತ್ರ

ಮೈಸೂರು: ದಸರಾ 2021ರ ಅಂಗವಾಗಿ ಅರಮನೆ ಅಂಗಳದಲ್ಲಿ ನಡೆಯುವ ಸಂಗೀತ ದರ್ಬಾರ್​ನಲ್ಲಿ ಇಂದು (ಶನಿವಾರ) ಕನ್ನಡದ ಖ್ಯಾತ ಗಾಯಕರ ಸಂಗೀತ ವೈಭವ ನಡೆಯಲಿದೆ. ಅರಮನೆ ವೇದಿಕೆಯಲ್ಲಿ ಮೂರನೇ ದಿನದ ಸಂಗೀತ ವೈಭವದಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಯಿಂದ 9.30 ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ರಿಂದ 7 ವರೆಗೆ ಖ್ಯಾತ ಕಲಾವಿದ ಎಚ್.ಎನ್.ಭಾಸ್ಕರ್ ಮತ್ತು ತಂಡದಿಂದ‌ ಸಂಗೀತ ದರ್ಬಾರ್ ನಡೆಯಲಿದೆ. ನಂತರ ಸಂಜೆ 7 ರಿಂದ ಹಂಸಲೇಖ ಮತ್ತು ಅವರ ತಂಡದಿಂದ ‘ನಾಲ್ವಡಿ ನಾಲ್ನುಡಿ’ ಕಾರ್ಯಕ್ರಮ ನಡೆಯಲಿದೆ.

‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಿ ತಾಲೀಮು:
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅಕ್ಟೋಬರ್ 15ರಂದು ನಡೆಯುವ ಜಂಬೂ ಸವಾರಿ ಮೆರವಣಿಗೆಗೆ ತಾಲೀಮು ನಡೆಯುತ್ತಿದೆ. ಅಕ್ಟೋಬರ್ 12, 13ರಂದು ಜಂಬೂಸವಾರಿ ರಿಹರ್ಸಲ್ ನಡೆಯಲಿದ್ದು, ಅ.15ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಿ ರಿಹರ್ಸಲ್ ನಡೆಸಲಾಗುತ್ತಿದೆ. ಇಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತರಿಂದ ಪುಷ್ಪಾರ್ಚನೆ ನಡೆಸಿ ತಾಲೀಮು ನಡೆಸಲಾಯಿತು. ರಿಹರ್ಸಲ್​​ನಲ್ಲಿ ಗಜಪಡೆ ಜೊತೆ ಅಶ್ವದಳವೂ ಭಾಗಿಯಾಗಿದೆ.

‘ಧನಂಜಯ’, ‘ಅಶ್ವತ್ಥಾಮ’ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದು, ಈ ಬಾರಿ ಅಶ್ವತ್ಥಾಮನಿಗೆ ಪಟ್ಟದ ಆನೆಯ ಜವಾಬ್ದಾರಿ ನೀಡಲಾಗಿದೆ. ಗೋಪಾಲಸ್ವಾಮಿ ಆನೆಯ ಗೈರಿನಲ್ಲಿ ಅಶ್ವತ್ಥಾಮನಿಗೆ ಜವಾಬ್ದಾರಿ ನೀಡಲಾಗಿದೆ. ಶ್ರೀರಂಗಪಟ್ಟಣಕ್ಕೆ ತೆರಳಲಿರುವ ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆಗಳು ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗಲು ಅಲ್ಲಿಗೆ ಪ್ರಯಾಣ ಬೆಳೆಸಿವೆ. ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮ ಮುಗಿಸಿ ನಂತರ ಅವು ಮರಳಲಿವೆ.

ನವರಾತ್ರಿಯ ಮೂರನೇ ದಿನ ಚಂದ್ರಘಂಟಾಪೂಜೆ:
ಮೈಸೂರು ಅರಮನೆಯಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ನವರಾತ್ರಿಯ 3ನೇ ದಿನವಾದ ಇಂದು ಚಂದ್ರಘಂಟಾ ಪೂಜೆ ನಡೆಯಲಿದೆ. ಅಡೆತಡೆ, ಚಿಂತೆ, ನೋವು ಇತ್ಯಾದಿ ನಿವಾರಣೆಗಾಗಿ ಪೂಜೆ ನಡೆಯಲಿದ್ದು, ಕೋಡಿ ಸೋಮೇಶ್ವರ ದೇವಾಲಯದಿಂದ ಕಳಸ ತಂದು ಪಟ್ಟದ ಆನೆ, ಕುದುರೆ, ಒಂಟೆ, ಹಸುಗೆ ಪೂಜೆ ಸಲ್ಲಿಕೆಯಾಗಲಿದೆ. ಬಳಿಕ ಯದುವೀರ್ ಅವರು ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಇದನ್ನೂ ಓದಿ:

KSRTC Dasara Tour: ದಸರಾದಲ್ಲಿ ಮೈಸೂರು ಸುತ್ತಬೇಕಾ?; ಕೆಎಸ್​ಆರ್​ಟಿಸಿಯಿಂದ ಪ್ರವಾಸದ ಪ್ಯಾಕೇಜ್ ಘೋಷಣೆ

Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್

TV9 Kannada

Leave a comment

Your email address will not be published. Required fields are marked *