ಮೈಸೂರು ಕೋರ್ಟ್ ಬಾಂಬ್ ಬ್ಲಾಸ್ಟ್ ಕೇಸ್; 3 ಆರೋಪಿಗಳನ್ನು ತಪ್ಪಿತಸ್ಥರೆಂದು ಕೋರ್ಟ್ ಆದೇಶ

ಬೆಂಗಳೂರು: ಮೈಸೂರಿನಲ್ಲಿ ಕೋರ್ಟ್ ಆವರಣದಲ್ಲಿ ಬಾಂಬ್ ಬ್ಲಾಸ್ಟ್​ ಕೇಸ್​​ಗೆ ಸಂಬಂಧಿಸಿದಂತೆ ಪ್ರಕರಣದ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಸಿಟಿ ಸಿವಿಲ್ ಎನ್ಐಎ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆ ಇದೆ.

ಈ ಉಗ್ರರು ಬೇಸ್ ಮೂವ್ಮೆಂಟ್ ಉಗ್ರ ಸಂಘಟನೆಯ ಉಗ್ರರಾಗಿದ್ದಾರೆ ಎನ್ನಲಾಗಿದೆ. ಬೇಸ್ ಮೂವ್ಮೆಂಟ್ ಅಲ್ ಖೈದಾ ಸಂಘಟನೆಯ ಅಂಗ ಉಗ್ರ ಸಂಘಟನೆ ಎಂಬ ಮಾಹಿತಿ ಇದೆ. A1 ಅಬ್ಬಾಸ್ ಆಲಿ, A2 ಸಮ್ ಸುನ್ ಕರೀಮ್ ರಾಜ ಮತ್ತು A5 ದಾವುದ್ ಸುಲೈಮಾನ್ ತಪ್ಪಿತಸ್ಥರೆಂದು ಕೋರ್ಟ್ ಹೇಳಿದೆ.

ಆಗಸ್ಟ್ 16, 2016 ರಲ್ಲಿ ಅಡುಗೆ ಕುಕ್ಕರ್​ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ ಆರೋಪ ಈ ಅಪರಾಧಿಗಳ ಮೇಲಿತ್ತು. ಇವರು ಮೊಳೆ, ಬ್ಯಾಟರಿ, ಚಿಕ್ಕ ಬಲ್ಬ್ಸ್, ಗ್ಲಾಸ್ ಪೀಸ್ ಗಳು, ಪಾಟಾಕಿ ಪೌಡರ್, ವೈಯರ್ ಬಳಸಿ ಇಂಪ್ರೂವೈಸಡ್ ಬಾಂಬ್ ತಯಾರು ಮಾಡಿದ್ದರು. ಮೈಸೂರಿನ ಜಿಲ್ಲಾ ಕೋರ್ಟ್​ನ ಶೌಚಾಲಯದಲ್ಲಿ ಬ್ಲಾಸ್ಟ್ ನಡೆದಿತ್ತು. ಘಟನೆಯಲ್ಲಿ 3 ಮಂದಿ ಗಂಭೀರ ಗಾಯಗೊಂಡಿದ್ದರು.
ಕೇಸ್‌ನಲ್ಲಿ‌ ನಡೆದ ಘಟನೆಯ ಬಗ್ಗೆ ಒಪ್ಪಿ ಸಾಕ್ಷಿಯಾಗಿದ್ದರಿಂದ A3 ಮಹಮ್ಮದ್ ಆಯೂಬ್​ಗೆ ಕ್ಷಮಾದಾನ ಆಗಿತ್ತು.. A4 ಸಂಶುದ್ದೀನ್ ಕರ್ವನ ಪಾತ್ರ ಕೇಸ್​ನಲ್ಲಿ ಇರಲಿಲ್ಲ ಎಂದು ಕೈಬಿಡಲಾಗಿತ್ತು. ಚಾರ್ಜ್ ಶೀಟ್ ನಿಂದಲೇ ಎನ್ಐಎ ಪೊಲೀಸ್ರು ಆತನ ಹೆಸರನ್ನು ಕೈ ಬಿಟ್ಟಿದ್ದರು.

ಸದ್ಯ ಮೂವರ ವಿರುದ್ಧ ಎನ್ಐಎ ಕೋರ್ಟ್ ತೀರ್ಪು ನೀಡಿದೆ. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು ಆರೋಪಿಗಳ ಮುಂದೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶರಾದ ಕಸನಪ್ಪ ನಾಯ್ಕ್​ ಆದೇಶ ಹೊರಡಿಸಿದ್ದಾರೆ. ಸೋಮವಾರ ಉಗ್ರರಿಗೆ ಶಿಕ್ಷೆ ಪ್ರಮಾಣ ಪ್ರಕಟ ಸಾಧ್ಯತೆ ಇದೆ. ಶಿಕ್ಷೆ ಪ್ರಮಾಣದ ಟ್ರಾಯಲ್ ಸೋಮವಾರ ನಡೆಯಲಿದೆ.. ಅದರ ಆಧಾರದ ಮೇಲೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಇನ್ನು ಎನ್​ಐಎ ಪರ SPP ಪ್ರಸನ್ನ ಕುಮಾರ್ ವಾದಿಸಲಿದ್ದಾರೆ.

News First Live Kannada

Leave a comment

Your email address will not be published. Required fields are marked *