ಮೈಸೂರು: ಚಾಮುಂಡಿಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ; ಒಂದೂವರೆ ತಿಂಗಳಲ್ಲಿ 1.77 ಕೋಟಿ ರೂ. ಸಂಗ್ರಹ | Total hundi collection of chamundi hills chamundeshwari temple 1.77 crores rupees in mysore


ಮೈಸೂರು: ಚಾಮುಂಡಿಬೆಟ್ಟದ ಹುಂಡಿಯಲ್ಲಿ ಭರ್ಜರಿ ಕಾಣಿಕೆ; ಒಂದೂವರೆ ತಿಂಗಳಲ್ಲಿ 1.77 ಕೋಟಿ ರೂ. ಸಂಗ್ರಹ

ಮೈಸೂರು ಚಾಮುಂಡಿ ಬೆಟ್ಟ

ಮೈಸೂರು: ಜಿಲ್ಲೆಯ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ(chamundeshwari temple) ಹುಂಡಿ‌ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಹುಂಡಿಯಲ್ಲಿ 1.77 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಸೆಪ್ಟೆಂಬರ್ 23ರಿಂದ ನವೆಂಬರ್ 10ರವರೆಗೆ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 98 ಲಕ್ಷ ರೂಪಾಯಿ ಹೆಚ್ಚು ಕಾಣಿಕೆ ಹಣ(Hundi collection) ಸಂಗ್ರಹವಾಗಿದೆ ಎಂದು ಹುಂಡಿ ಎಣಿಕೆ ಸಂಬಂಧ ಚಾಮುಂಡೇಶ್ವರಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ದಸರಾ, ದೀಪಾವಳಿ ಹಬ್ಬದ‌ ಹಿನ್ನೆಲೆ ಭರ್ಜರಿ ಕಾಣಿಕೆ ಸಂಗ್ರಹ
ವಿಶೇಷ ದರ್ಶನ, ಲಾಡು – ಪ್ರಸಾದ ಹೊರತುಪಡಿಸಿ ಚಾಮುಂಡೇಶ್ವರಿ ದೇವಾಲಯದ ಹುಂಡಿಯಲ್ಲಿ ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಇದಕ್ಕೆ ಒಂದು ರೀತಿಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಪ್ರಮುಖ ಕಾರಣವಾಗಿದೆ.

2000 ರೂಪಾಯಿ ಮುಖಬೆಲೆ 223 ನೋಟುಗಳು, 500 ರೂಪಾಯಿ ಬೆಲೆಯ 14372 ನೋಟುಗಳು, 200 ರೂಪಾಯಿ ಬೆಲೆಯ 4728 ನೋಟುಗಳು, 100 ರೂಪಾಯಿ ಮುಖಬೆಲೆಯ 57003, 50 ರೂಪಾಯಿ ಮುಖಬೆಲೆಯ 30,280 ನೋಟಗಳು, 20 ರೂಪಾಯಿ ಮುಖಬೆಲೆಯ 26,012 ನೋಟುಗಳು, 10 ರೂಪಾಯಿ ಮುಖಬೆಲೆ 96,505 ನೋಟುಗಳಿಂದ 1,74,85,623 ಕೋಟಿ ರೂಪಾಯಿ ಹಾಗೂ 10,5,21 ಹಾಗೂ 3,09,862 ಲಕ್ಷ ರೂಪಾಯಿ ಸೇರಿದಂತೆ ಒಟ್ಟಾರೆಯಾಗಿ 1,77,95,485 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ:
Tirupati Temple : ತಿರುಪತಿ ದೇವಾಲಯದ ಹುಂಡಿ ಹಣ ಎಣಿಕೆ; 24 ಗಂಟೆಗಳಲ್ಲಿ 1.80 ಕೋಟಿ ರೂ. ಸಂಗ್ರಹ

Hassanambe hundi collection: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ; ಹೊಳೆನರಸೀಪುರ ಶಾಸಕರ ಬದಲಾಯಿಸು ತಾಯೇ ಎಂದು ಭಕ್ತರಿಂದ ಮೊರೆ

TV9 Kannada


Leave a Reply

Your email address will not be published. Required fields are marked *