ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಬಹುತೇಕ ಪಕ್ಕಾ; ಅಧಿಕೃತ ಘೋಷಣೆಯೊಂದೇ ಬಾಕಿ | Congress candidate Madhu Madhagowda all most wins the South Graduate election in mysore; the official announcement is Pending


ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಬಹುತೇಕ ಪಕ್ಕಾ; ಅಧಿಕೃತ ಘೋಷಣೆಯೊಂದೇ ಬಾಕಿ

ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ

ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲೋಪ್ಪಿಕೊಂಡಿದ್ದಾರೆ. ಇನ್ನೆರಡು ಸುತ್ತು ಮಾತ್ರ ಬಾಕಿಯಿದ್ದು, ಗೆಲುವು ಕಷ್ಟವಿದೆ. ಮತ‌ಎಣಿಕೆ ಕೇಂದ್ರ ಮುಂಭಾಗ ಮೈವಿ ರವಿಶಂಕರ್ ಬೇಸರದ ಮಾತುಗಳನ್ನಾಡಿದರು.

ಮೈಸೂರು: ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ (Election) ಮತ ಎಣಿಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲುವು ಬಹುತೇಕ ಪಕ್ಕಾ ಆಗಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಎಲ್ಲ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ (Congress) ಅಭ್ಯರ್ಥಿ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು ಇದಾಗಿದ್ದು, 2ನೇ ಬಾರಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಸೋಲಿನ ಹಾದಿಯಲ್ಲಿದ್ದಾರೆ. ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ ಬಿಜೆಪಿಗೆ ಬಂಡಾಯ ಮುಳುವಾಗಿದ್ದು, ಜೆಡಿಎಸ್ ಬಿಜೆಪಿ ಒಳ ಜಗಳದ ಲಾಭವನ್ನ ಕಾಂಗ್ರೆಸ್ ಪಡೆದುಕೊಂಡಿದೆ. ಹಳೇ ಮೈಸೂರು ಭಾಗದಲ್ಲಿ ಮತ್ತೆ ಕೈ ಕನಸು ಚಿಗುರಿದೆ. ಮಂಡ್ಯ ಹಾಸನದಲ್ಲಿ ಶಾಸಕರಿಲ್ಲದಿದ್ದರು ಮುನ್ನಡೆ ಸಾಧಿಸಿದೆ. ಮೈಸೂರು ಚಾಮರಾಜನಗರದಲ್ಲೂ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದ್ದು, ಜೆಡಿಎಸ್ ಬಿಜೆಪಿಗೆ ಮುಖಭಂಗವಾಗಿದ್ದು, ಹಳೆ ಮೈಸೂರು ಭಾಗದ ಭದ್ರಕೋಟೆ ಛಿದ್ರವಾಗಿದೆ. ಬಿಜೆಪಿಯಿಂದ ಸಿಎಂ ಸೇರಿ ಹಲವು ಸಚಿವರಿಂದ ಪ್ರಚಾರ ಮಾಡಲಾಗಿದೆ. ಜೆಡಿಎಸ್​ನಿಂದಲೂ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯಿಂದ ಕೂಡ ಪ್ರಚಾರ ಮಾಡಿದ್ದು ಸದ್ಯ ಎರಡು ಪಕ್ಷಗಳಿಗೆ ಸೋಲಿನ ಭಯ ಉಂಟಾಗಿದೆ.

ಫಲಿತಾಂಶಕ್ಕೂ ಮುನ್ನ ಸೋಲೋಪ್ಪಿಕೊಂಡ ಬಿಜೆಪಿ ಅಭ್ಯರ್ಥಿ

ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲೋಪ್ಪಿಕೊಂಡಿದ್ದಾರೆ. ಇನ್ನೆರಡು ಸುತ್ತು ಮಾತ್ರ ಬಾಕಿಯಿದ್ದು, ಗೆಲುವು ಕಷ್ಟವಿದೆ. ಮತ‌ಎಣಿಕೆ ಕೇಂದ್ರ ಮುಂಭಾಗ ಮೈವಿ ರವಿಶಂಕರ್ ಬೇಸರದ ಮಾತುಗಳನ್ನಾಡಿದರು. ಸತತ ಹಿನ್ನೆಡೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಒಬ್ಬಂಟಿಯಾಗಿದ್ದಾರೆ. ಎಣಿಕಾ ಕೇಂದ್ರ ಮುಂಭಾಗದಲ್ಲಿ ಮೈವಿ ರವಿಶಂಕರ್ ಒಬ್ಬಂಟಿಯಾಗಿ ಕುಳಿತಿದ್ದಾರೆ. ಬಹಳಷ್ಟು ಕಷ್ಟ ಪಟ್ಟಿದ್ದೆವು ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಜೆಡಿಎಸ್ ಮತಗಳೆಲ್ಲಾ ಕಾಂಗ್ರೆಸ್ ಪಾಲಾಗಿವೆ. ಇನ್ನೆರಡು ಸುತ್ತು ಮಾತ್ರ ಬಾಕಿ ಇದೆ. ಗೆಲುವು ಕಷ್ಟ ಸಾಧ್ಯ, ಅಪ್ಪಟ ಬಿಜೆಪಿಗರ ಮತ ಮಾತ್ರ ನನಗೆ ಸೇರಿದೆ ಎಂದು ಬೇಸರದ ಹೇಳಿಕೆಯನ್ನು ನೀಡಿದರು.

ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಿನ್ನೆ ಮುಕ್ತಾಯ

ದಕ್ಷಿಣ ಪದವೀಧರ ಕ್ಷೇತ್ರ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ನಿನ್ನೆ ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಹೇಳಿದ್ದಾರೆ. ಒಟ್ಟು 49,700 ಮತಗಳು ಎಣಿಕೆಯಾಗಿದ್ದು, ಇನ್ನೂ 49,000 ಮತ ಎಣಿಕೆ ಬಾಕಿ ಇವೆ ಎಂದು ತಿಳಿಸಿದ್ದಾರೆ.  ಕಾಂಗ್ರೆಸ್ (Congress) : 16,137, ಬಿಜೆಪಿ (BJP) : 13,179, ಜೆಡಿಎಸ್ (JDS) : 8,512 ಪ್ರಸನ್ನ ಗೌಡ : 3,142, ವಿನಯ್ : 1,890, ಬಿಎಸ್ಪಿ : 1,418 , ತಿರಸ್ಕೃತ : 3,718, ಕಾಂಗ್ರೆಸ್ ಅಭ್ಯರ್ಥಿ 2,958 ಮತಗಳ ಮುನ್ನೆಡೆಯಲ್ಲಿವೆ ಎಂದು ಹೇಳಿದರು.

ವಿಧಾನ ಪರಿಷತ್​ನ (MLC Election) ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ನಡೆದಿದ್ದ ಚುನಾವಣಾ ಫಲಿತಾಂಶ ಇಂದು ಹೊರಬೀಳುತ್ತಿದೆ. ​​ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ 59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ 70, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ 84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.