ಮೈಸೂರು ದಸರಾ: ಅರಮನೆಯಲ್ಲಿ ಆಯುಧ ಪೂಜೆಯ ಸಡಗರ

ವಿಶ್ವ ವಿಖ್ಯಾತ ಮೈಸೂರು ದಸರಾ 2021: ಅರಮನೆ ನಗರಿಯಲ್ಲಿ ದಸರಾ ದರ್ಬಾರ್​ ಜೋರಾಗಿದ್ದು, ಇಂದು ಆಯುಧಪೂಜೆಯ ಸಡಗರ ಕಳೆಗಟ್ಟಿದೆ.

ಕೊರೊನಾ ಕಾರಣ ಅರಮನೆಯಲ್ಲಿ ಸರಳವಾಗಿ ಆಯೂಧ ಪೊಜೆಯ ಕಾರ್ಯಕ್ರಮಗಳು ನಡೆಯುತ್ತಿದೆ. ಬೆಳಗ್ಗೆ 5.30ರಿಂದಲೇ ಪೂಜಾ ವಿಧಿ ವಿಧಾನ ಆರಂಭವಾಗಿದೆ. 7.45ಕ್ಕೆ ರಾಜ ಮಹಾರಾಜರ ಆಯುಧಗಳನ್ನ ಅರಮನೆಯ ಕೋಡಿ ಸೋಮೇಶ್ವರ ದೇಗುಲಕ್ಕೆ ತರಲಾಗಿದೆ.

11 ಗಂಟೆಗೆ ಆನೆಗಳ ಪೂಜೆ
ಕೊರೊನಾ ಕಾರಣಕ್ಕೆ ಅರಮನೆ ಆಚರಣೆಗಳ ವೀಕ್ಷಣೆಗೆ ರಾಜ ವಂಶಸ್ಥೆ ಪ್ರಮೋದಾದೇವಿ ನಿರ್ಬಂಧ ಹೇರಿದ್ದಾರೆ. ಇನ್ನು ಮುಂಜಾನೆಯಿಂದ ಚಾಮುಂಡಿ ಬೆಟ್ಟದಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆಗಳನ್ನ ನೆರವೇರಿಸುತ್ತಿದ್ದಾರೆ. ಇದೀಗ ಅರಮನೆ ಆನೆ ಬಾಗಿಲ ಮುಂದೆ ಪಲ್ಲಕ್ಕಿಯನ್ನ ತಂದು ನಿಲ್ಲಿಸಲಾಗಿದೆ. ಪಲ್ಲಕ್ಕಿಯಲ್ಲಿ ಯುದ್ಧ ಸಲಕರಣೆಗಳನ್ನು ಹೊತ್ತು ತರಲಾಗುತ್ತದೆ.

ಬೆಳಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ನಡೆಯಲಿದೆ. ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಅವರು ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 5.45ಕ್ಕೆ ಆನೆ ಕುದುರೆ ಹಸುಗಳು ಆಗಮಿಸಿವೆ.

ಆನೆಗಳಿಗೆ ಸ್ನಾನ
ಇನ್ನು ಬೆಳ್ಳಂಬೆಳಗ್ಗೆ ದಸರಾ ಆನೆಗಳಿಗೆ ಮಜ್ಜನ ಮಾಡಿಸಲಾಗಿದೆ. ಅಭಿಮನ್ಯು ಅಂಡ್ ಟೀಂ‌ಗೆ ಸ್ನಾನ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸುತ್ತಿದ್ದಾರೆ. ಅರಮನೆ ಆಯುಧ ಪೂಜೆ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿ ಹಾಗೂ ಚೈತ್ರಾ ಆನೆ ಭಾಗಿಯಾಗಿವೆ. ಉಳಿದ ಆನೆಗಳು ಅರಮನೆ ಅಂಗಳದಲ್ಲಿ ಸ್ನಾನ ಮಾಡುತ್ತಿವೆ.

News First Live Kannada

Leave a comment

Your email address will not be published. Required fields are marked *