ಮೈಸೂರು ಪರಿಷತ್​​ ಕದನದಲ್ಲಿ ಮಹಾ ತಂತ್ರ -ಜೆಡಿಎಸ್​​ ಸೋಲಿಸಲು ಸಜ್ಜಾದ ತ್ರಿವಳಿ ಕೂಟ!


ಮೈಸೂರು: ಜೆಡಿಎಸ್​​ ನಾಯಕರ ಮೇಲಿನ ಸಿಟ್ಟು. ನಿರ್ಲಕ್ಷ್ಯಗಳ ವಿರುದ್ಧದ ತಾಪ. ಹೆಡೆ ಎತ್ತಿದ ಸೋಲಿನ ಸೇಡು. ಈ ಮೂರು ದಿಕ್ಕುಗಳು ಒಂದಾಗಿವೆ. ದಳಪತಿಗಳ ಗ್ರಹಗತಿ ಬದಲಿಸಲು ಪಣ ತೊಟ್ಟಿವೆ.. ಮೈಸೂರಿನ ಪರಿಷತ್​​ ಕಣದಲ್ಲಿ ಜೆಡಿಎಸ್​​​ ನೆತ್ತಿಯ ಮೇಲೆ ಕಾರ್ಮೋಡ ಆವರಿಸುವಂತೆ ಮಾಡಿದೆ.

ಮೈಸೂರಿನ ಪರಿಷತ್​​​​ ದಿಗ್ವಿಜಯಕ್ಕೆ ದಳಕೋಟೆಗೆ ಸ್ವಪಕ್ಷದ ನಾಯಕರೇ ದ್ವಾರ ಮುಚ್ತಿದ್ದಾರೆ. ತ್ರಿಕೋನ ಹೋರಾಟದಲ್ಲಿ ಕಾಂಗ್ರೆಸ್​​ನೊಂದಿಗೆ ಪಕ್ಷದ ಒಳಗಿನ ನಾಯಕರೇ ದೋಸ್ತಿ ಕುದುರಿಸಿದ್ದಾರೆ.. ಮೈಸೂರಿನಲ್ಲಿ ದಳಪತಿಗಳಿಗೆ ಚಕ್ರವ್ಯೂಹ ಹೆಣೆಯಲಾಗ್ತಿದ್ದು, ದಳ ಅಭ್ಯರ್ಥಿಯನ್ನ ಸೋಲಿಸಲು ಪಕ್ಷದ ಬಂಡಾಯ ನಾಯಕರೇ ಖೆಡ್ಡಾ ತೋಡಿದ್ದಾರೆ.

ಹೌದು, ಮೈಸೂರು ಯುದ್ಧದಲ್ಲಿ ದಳಪತಿಗಳಿಗೆ ಒಳೇಟು ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಬಂಡಾಯ ನಾಯಕರಿಂದಲೇ ಜೆಡಿಎಸ್‌ ವಿರುದ್ಧ ರಣತಂತ್ರ ಹೆಣೆಯಲಾಗಿದೆ. ಹೆಚ್‌ಡಿಕೆ ಮೇಲಿನ ಕೋಪಕ್ಕೆ ಅಭ್ಯರ್ಥಿ ಸೋಲಿಸಲು ವ್ಯೂಹ ಹೆಣೆಯಲಾಗಿದೆ. ಜೆಡಿಎಸ್​​ ಸೋಲಿಸಲೇಬೇಕು ಎಂದು ಹಠ ತೊಟ್ಟಿರುವ ಬಂಡಾಯಗಾರರು, ಹಸ್ತಪಡೆಯೊಂದಿಗೆ ಬಹಿರಂಗವಾಗಿಯೇ ಕೈಕುಲುಕಿದ್ದಾರೆ.

ಹಸ್ತಲಾಘವ ಮಾಡಲು ಮುಂದಾಗಿರುವ ಜಿ.ಟಿ ದೇವೇಗೌಡ, ಜೆಡಿಎಸ್​ ಉಪ ವರಿಷ್ಠರ ಮೇಲಿನ ಸಿಟ್ಟು ಸೆಡುವುಗಳಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾದಂತಿದೆ.. ಇನ್ನೋರ್ವ ನಾಯಕ ಸಂದೇಶ್ ನಾಗರಾಜ್‌, ಮೊನ್ನೆ ಮೊನ್ನೆ ಹೆಚ್​​ಡಿಕೆ ಜೊತೆ ಭೋಜನ ಸವಿದಿದ್ದರು.. ಟಿಕೆಟ್​​ ಕೈತಪ್ಪುತ್ತಲೇ ಸಿದ್ದು ಕ್ಯಾಂಪ್​​ಗೆ ಜಂಪ್​ ಆಗಿದ್ದಾರೆ.

ಈ ಇಬ್ಬರು ನಾಯಕರು, ಮೇಲ್ಮನೆ ಕದಾಟದಲ್ಲಿ ಎದುರಾಳಿ ಪಡೆಗೆ ಸೇರ್ಪಡೆ ಆಗಿರೋದು ದಳಪತಿಯನ್ನ ಕಂಗೆಡೆಸಿದೆ.. ಅಷ್ಟಕ್ಕೂ ಈ ನಾಯಕರು, ಹೆಣೆದಿರುವ ತಂತ್ರ ಏನು ಅನ್ನೋದನ್ನ ಹೇಳ್ತಿವಿ ಓದಿ..

‘ದಳ’ಕ್ಕೆ ಮೈಸೂರು ಸಂಕಟ

  • ತಂತ್ರ 1 : ಮೊದಲ ಪ್ರಾಶಸ್ತ್ಯದ ಮತವನ್ನ ಕಾಂಗ್ರೆಸ್ ಹಾಕಿಸುವುದು
  • ತಂತ್ರ 2 : ಹಸ್ತಕ್ಕೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸುವ ಭರವಸೆ
  • ತಂತ್ರ 3 : ಸಿದ್ದರಾಮಯ್ಯಗೆ ಸಂದೇಶ್ & ಜಿಟಿಡಿಯಿಂದ ಭರವಸೆ
  • ತಂತ್ರ 4 : ಎರಡನೇ ಪ್ರಾಶಸ್ತ್ಯದ ಮತ ಬಿಜೆಪಿಗೆ ವರ್ಗಾಯಿಸುವುದು
  • ತಂತ್ರ 5 : ಈ ಸಂಬಂಧ ಸಚಿವ ಸೋಮಶೇಖರ್ ಜೊತೆ ಮಾತುಕತೆ
  • ತಂತ್ರ 6 : ಈ ಮೂಲಕ ಮೈಸೂರಿನಲ್ಲಿ ಜೆಡಿಎಸ್​ ಸೋಲಿಸಲು ಪಣ

ಒಟ್ಟಾರೆ, ಮೈಸೂರು ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಲು ರಣವ್ಯೂಹ ಹೆಣೆಯಲಾಗಿದ್ದು, ಸೋಲಿನ ಸರಣಿಗಳಿಗೆ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಪ್ಲಾನ್​​ ಮಾಡಿದ್ದಾರೆ.. ಮೈಸೂರಿನ ಈ ತ್ರಿವಳಿಗಳ ತಂತ್ರ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡುತ್ತೆ ಅನ್ನೋದು ಫಲಿತಾಂಶದಲ್ಲೇ ಉತ್ತರ ಸಿಗಲಿದೆ.

ವಿಶೇಷ ವರದಿ: ಹರೀಶ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​.

News First Live Kannada


Leave a Reply

Your email address will not be published. Required fields are marked *