ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರ: ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 8 ರೈಲುಗಳ ಸಂಚಾರ ರದ್ದು | Due to Heavy rain Mysore to Bangalore 8 trains cancelled


ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಧ್ಯಮ ಪ್ರಕಟನೆ ಹೊರಡಿಸಿದೆ. ಸೇತುವೆ ಸಂಖ್ಯೆ 627 ಮದ್ದುರು ಹನ್ನಕೆರೆ ನಡುವೆ ಪ್ರವಾಹದ ಹಿನ್ನಲೆ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ.

ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರ: ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ 8 ರೈಲುಗಳ ಸಂಚಾರ ರದ್ದು

ಸಾಂದರ್ಭಿಕ ಚಿತ್ರ

ಮೈಸೂರು: ರಾಜ್ಯದಲ್ಲಿ ವರುಣನ(Karnataka Rains) ಅಬ್ಬರ ಮುಂದುವರಿದಿದೆ. ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗ್ತಿದ್ದು ಗುಡ್ಡ ಕುಸಿತ ಸಂಭವಿಸುತ್ತಿದೆ. ರಸ್ತೆ, ಮನೆಗಳು, ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದೆ. ಸೇತುವೆಗಳು ಮುಳುಗಿ ಹೋಗಿವೆ. ಅನಾಹುತಗಳು ಸಂಭವಿಸುತ್ತಿವೆ. ಜೊತೆಗೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆಯ ಅವಾಂತರ ಹಿನ್ನಲೆ ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಲಾಗಿದೆ.

ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಧ್ಯಮ ಪ್ರಕಟನೆ ಹೊರಡಿಸಿದೆ. ಸೇತುವೆ ಸಂಖ್ಯೆ 627 ಮದ್ದುರು ಹನ್ನಕೆರೆ ನಡುವೆ ಪ್ರವಾಹದ ಹಿನ್ನಲೆ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಬರುವ 8 ರೈಲುಗಳನ್ನು ರದ್ದು ಮಾಡಲಾಗಿದೆ.
1.ಮೆಮು ರೈಲ್ವೇ ಸಂಖ್ಯೆ 06525 ಬೆಂಗಳೂರು ದಿಂದ ಮೈಸೂರು ಸಂರ್ಪೂಣ ರದ್ದು
2.ಮೆಮು ರೈಲ್ವೇ ಸಂಖ್ಯೆ 06526 ಮೈಸೂರು ದಿಂದ ಬೆಂಗಳೂರು ಸಂರ್ಪೂಣ ರದ್ದು
3.ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ದಿಂದ ಮೈಸೂರು ಸಂರ್ಪೂಣ ರದ್ದು
4. ರೈಲ್ವೇ ಸಂಖ್ಯೆ 07328 ಚಾಮರಾಜನಗರ ದಿಂದ ಮೈಸೂರು ಸಂರ್ಪೂಣ ರದ್ದು
5.ರೈಲ್ವೇ ಸಂಖ್ಯೆ ಮೈಸೂರುನಿಂದ ಎಸ್ ಎಂ ವಿ ಬೈಯಪನಹಳ್ಳಿ ಎಕ್ಸ್ ಪ್ರಸ್ ರೈಲ್ವೆ ರದ್ದು
6.ರೈಲ್ವೇ ಸಂಖ್ಯೆ ಎಸ್ ಎಂ ವಿ ಬೈಯಪನಹಳ್ಳಿ ನಿಂದ ಮೈಸೂರು ಎಕ್ಸ್ ಪ್ರಸ್ ರೈಲ್ವೆ ರದ್ದು
7.ರೈಲ್ವೇ ಸಂಖ್ಯೆ 06560 ಮೈಸೂರು ನಿಂದ ಬೆಂಗಳೂರು ಸಂರ್ಪೂಣ ರದ್ದು
8.ಮೆಮು ರೈಲ್ವೇ ಸಂಖ್ಯೆ 06255 ಬೆಂಗಳೂರು ನಿಂದ ಮೈಸೂರು ಸಂರ್ಪೂಣ ರದ್ದು

ಇನ್ನು ರೈಲ್ವೇ ಸಂಖ್ಯೆ 07346 ತುಮಕೂರು ದಿಂದ ಚಾಮರಾಜನಗರ ಪ್ಯಾಸೇಂಜರ್ ಕೂಡ ರದ್ದು ಮಾಡಲಾಗಿದೆ. ರೈಲ್ವೇ ಸಂಖ್ಯೆ 07346 ರಾಮನಗರದಿಂದ ಚಾಮರಾಜನಗರ ಪ್ಯಾಸೇಂಜರ್ ರೈಲು ರದ್ದಾಗಿದ್ದು ರೈಲ್ವೇ ಸಂಖ್ಯೆ 16227 ಮೈಸೂರು ದಿಂದ ತಾಳಗುಪ್ಪ ಎಕ್ಸ್ ಪ್ರಸ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *