ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್ | Karnataka minister of co operation ST Somashekhar announces every ward of Mysuru City Corporation gets Rs 8 lakhs each for rain problems


ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್

ಸಚಿವ ಎಸ್.ಟಿ. ಸೋಮಶೇಖರ್

ಮೈಸೂರು: ನಗರದಲ್ಲಿ ಮಳೆ ಹಾನಿ ಹಾಗೂ ರಸ್ತೆ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಿಗೆ 8 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ S.T.ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೆಆರ್‌ಎಸ್‌ಗೆ ಬಾಗಿನ ಬಿಡುವ ವೇಳೆ ಸಿಎಂ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಅವರು ನುಡಿದಿದ್ದಾರೆ. ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲಿ ರಸ್ತೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶೀಘ್ರದಲ್ಲೇ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲಿಸುತ್ತಾರೆ. ರಸ್ತೆ ದುರಸ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಮಳೆ ನಿಲ್ಲುವವರೆಗೂ ಕಾಮಗಾರಿ‌ ಮಾಡುವುದಕ್ಕೆ ಕಷ್ಟ. ಆದರೆ ಕಾಮಗಾರಿಗೆ ಬೇಕಾದ ತಯಾರಿ‌ ಮಾಡಿಕೊಳ್ಳುತ್ತೇವೆ ಎಂದು ಸೋಮಶೇಖರ್ ಹೇಳಿದ್ಧಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಇಂದು ಕೂಡ ಭಾರಿ ಮಳೆ ಬಂದರೆ ಅನಾಹುತವಾಗಲಿದೆ: ಎಸ್​.ಟಿ ಸೋಮಶೇಖರ್
ನಿನ್ನೆ ಬಿದ್ದ ಭಾರಿ ಮಳೆಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ದೊಡ್ಡ ಅನಾಹುತ ಸದ್ಯಕ್ಕೆ ಆಗಿಲ್ಲ. ಆದರೆ ಇವತ್ತು ಅದೇ ಪ್ರಮಾಣದಲ್ಲಿ ಮಳೆ ಬಂದರೆ ದೊಡ್ಡ ಮಟ್ಟದಲ್ಲಿ ಅನುಹುತ‌ ಆಗುತ್ತದೆ. ಜನರಿಗೆ ಆದಷ್ಟು ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ಕ್ರಮ‌ ಕೈಗೊಳ್ಳುತ್ತೆವೆ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ  ನೀಡಿದ್ದಾರೆ.

ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುತ್ತೇವೆ: ಎಸ್.ಟಿ ಸೋಮಶೇಖರ್
ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಬಿಜೆಪಿಗೆ ಸೋಲಾದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಚಿವರು, ಸೋತಿದ್ದೇವೆ ಎಂದು ನಾವು ಕಾಂಗ್ರೆಸ್‌ನವರಂತೆ ನಾವು ಮನೆಯಲ್ಲಿ ಕುಳಿತುಕೊಳ್ಳಲ್ಲ. ಬಿಜೆಪಿ ಸೋಲಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್‌ನವರು ಬಿಜೆಪಿ ಗೆದ್ದಿರುವ ಲೀಡ್ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಬಿಜೆಪಿ ಸೋತ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ತೈಲ ಬೆಲೆ ಇಳಿಕೆಗೂ, ಬಿಜೆಪು ಸೋಲಿಗೂ ಕಾಂಗ್ರೆಸ್ ಸಂಬಂಧ ಕಲ್ಪಿಸಿದ ಕುರಿತಂತೆ ಮಾತನಾಡಿದ ಅವರು, ಬೈಎಲೆಕ್ಷನ್ ರಿಸಲ್ಟ್‌ಗೂ ತೈಲ ಬೆಲೆ ಇಳಿಕೆಗೆ ಸಂಬಂಧವಿಲ್ಲ. ತೈಲ ಬೆಲೆ ಇಳಿಕೆ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯ ಮಾಡುತ್ತಾರೆ. ಅವರಿಂದ ಮತ್ತೇನೂ ನಿರೀಕ್ಷೆ ಮಾಡಲು ಆಗಲ್ಲ. ವಿರೋಧ ಪಕ್ಷದವರು ಮಾಡಿದಂತೆ ಅವರು ವಿರೋಧಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ‌.ಸೋಮಶೇಖರ್ ಹೇಳಿಕೆ ನೀಡಿದ್ಧಾರೆ.

ಇದನ್ನೂ ಓದಿ:

5 Years Of Demonetisation: ನೋಟು ನಿಷೇಧದ 5 ವರ್ಷಗಳ ನಂತರವೂ ಸಾರ್ವಜನಿಕರ ಮಧ್ಯೆ ನಗದು ವಹಿವಾಟಿಗೇ ಆದ್ಯತೆ

Night Curfew: ನೈಟ್ ಕರ್ಫ್ಯೂ ಹಿಂಪಡೆದು ಆದೇಶ ಹೊರಡಿಸಿದ ಸರ್ಕಾರ

TV9 Kannada


Leave a Reply

Your email address will not be published. Required fields are marked *