ಬೆಂಗಳೂರು: ಮೈಸೂರು ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಪ್ರಕರಣದ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್​ ನಡೆಸಿತು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಮೈಸೂರು ಮೇಯರ್ ಸ್ಥಾನಕ್ಕೆ ಜೂನ್ 11 ರಂದು ಚುನಾವಣೆ ನಿಗದಿಯಾಗಿದೆ. ನನ್ನ ಹೆಸರಲ್ಲಿ ಆಸ್ತಿ ಇರದ ಕಾರಣ ಪತಿ ಮಾದೇಗೌಡ ಆಸ್ತಿಯನ್ನ ನನ್ನ ಆಸ್ತಿಯೆಂದು ಘೋಷಿಸಿದ್ದೆ. ಈ ಹಿನ್ನಲೆ ಪ್ರಮಾದವಾಗಿತ್ತು ಎಂದು ಮೇಲ್ಮನವಿ ಸಲ್ಲಿಸೋದಾಗಿ ರುಕ್ಮಿಣಿ ಹೇಳಿದ್ದರು. ಹೀಗಾಗಿ ಕೋರ್ಟ್​ ವಿಚಾರಣೆಯನ್ನ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿದೆ.

The post ಮೈಸೂರು ಮಾಜಿ ಮೇಯರ್ ಸದಸ್ಯತ್ವ ರದ್ದು ಕೇಸ್​; ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್​ appeared first on News First Kannada.

Source: newsfirstlive.com

Source link